Friday, 13th December 2024

ಮೆಲ್ಬರ್ನ್‌‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಖಲಿಸ್ತಾನಿಗಳಿಂದ ಹಲ್ಲೆ

ಮೆಲ್ಬರ್ನ್: ಖಲಿಸ್ತಾನಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದ್ದು, ಶುಕ್ರವಾರ ಆಸ್ಪ್ರೇಲಿ ಯಾದ ಮೆಲ್ಬರ್ನ್ನನಲ್ಲಿ ಭಾರತೀಯ ವಿದ್ಯಾರ್ಥಿಗೆ ೪ ರಿಂದ ೫ ಖಲಿಸ್ತಾನಿಗಳು ಹಲ್ಲೆ ನಡೆಸಿದ್ದಾರೆ.

ವಿದ್ಯಾಭ್ಯಾಸದ ಜೊತೆ ಚಾಲಕನ ಕೆಲಸ ಮಾಡುತ್ತಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ವಾಹನದಲ್ಲಿ ಕುಳಿತಿದ್ದ. ಈ ವೇಳೆ ಕಬ್ಬಿಣದ ಸರಳುಗಳನ್ನು ಹಿಡಿದು ಬಂದ 4ರಿಂದ 5ಖಲಿಸ್ತಾನಿ ಉಗ್ರರು ಯುವಕನ ತಲೆ, ಬೆನ್ನು ಹಾಗೂ ಕಾಲುಗಳಿಗೆ ತೀವ್ರವಾಗಿ ಹಲ್ಲೆ ನಡೆಸಿದರು.

ಜೊತೆಗೆ ಖಲಿಸ್ತಾನಿಗಳನ್ನು ವಿರೋಧಿಸಿದರೆ ಬುದ್ಧಿ ಕಲಿಸುತ್ತೆವೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಬಳಿಕ ಯುವಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಖಲಿಸ್ತಾನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮಾರ್ಚ್‌‌ನಲ್ಲಿ ಖಾಲಿಸ್ತಾನಿ ಉಗ್ರರು ಲಂಡನ್‌ನಲ್ಲಿರುವ ಭಾರತೀಯ ಹೈಕಮೀಷನರ್ ಕಚೇರಿಯಲ್ಲಿ ಹಾರಿಸಲಾಗಿದ್ದ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಅಲ್ಲಿ ಖಲಿಸ್ತಾನ್ ಧ್ವಜ ಹಾರಿಸುವ ಯತ್ನ ಮಾಡಿದ್ದಾರೆ.

ಕಚೇರಿಯ ಗಾಜುಗಳನ್ನು ಒಡೆದ ಖಲಿಸ್ತಾನಿ ಬೆಂಬಲಿಗ ಪಡೆ ಬಳಿಕ ಕಚೇರಿಯ ಮುಂದೆ ಹಾರಿಸಿದ್ದ ಭಾರತದ ರಾಷ್ಟ್ರಧ್ವದ ಕೆಳಗಿಳಿಸಿ ತನ್ನ ಧ್ವಜ ಹಾರಿಸುವ ಕೆಲಸ ಮಾಡಿದೆ. ಜೊತೆಗೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆ ಕೂಗಿದೆ.