Wednesday, 11th December 2024

ಅಮೆರಿಕನ್-ಭಾರತೀಯ ಲೇಖಕ ವೇದ್ ಮೆಹ್ತಾ ನಿಧನ

ನ್ಯೂಯಾರ್ಕ್: ಅಂಧತ್ವ ಮೀರಿ ಬೆಳೆದ, ಬರವಣಿಗೆಯ ಮೂಲಕ ಅಮೆರಿಕಕ್ಕೆ ಭಾರತವನ್ನು ಪರಿಚಯಿಸಿದ ಅಮೆರಿಕನ್-ಭಾರತೀಯ ಲೇಖಕ ವೇದ್ ಮೆಹ್ತಾ (86) ತಮ್ಮ ಸ್ವಗೃಹದಲ್ಲಿ ನಿಧನರಾದರು.

ಲಾಹೋರ್‌ನ ಪಂಜಾಬಿ ಕುಟುಂಬದಲ್ಲಿ 1934ರಲ್ಲಿ ಜನಿಸಿದ ವೇದ್ ಮೂರು ವರ್ಷವಿರುವಾಗಲೇ ಕಣ್ಣುಗಳ ದೃಷ್ಟಿ ಕಳೆದು ಕೊಂಡರು. ಆದರೆ, ಅಂಧತ್ವ ಮೀರಿ ತಮ್ಮ ವೃತ್ತಿಜೀವನ ರೂಪಿಸಿಕೊಂಡರು.

15 ವರ್ಷವಿರುವಾಗಲೇ ಅಮೆರಿಕಕ್ಕೆ ಬಂದ ಮೆಹ್ತಾ ನೆಲೆ ಕಂಡುಕೊಂಡರು. ಪೊಮೊನಾ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾ ಲಯದಲ್ಲಿ ಅಧ್ಯಯನದ ಬಳಿಕ ತಮ್ಮ 26ನೇ ವಯಸ್ಸಿನಲ್ಲಿ ಬರಹಗಾರರಾಗಿ ಪತ್ರಿಕೆಗೆ ಸೇರಿಕೊಂಡರು. ಮೆಹ್ತಾ ತಮ್ಮ ಬರಹ ದಲ್ಲಿ ಭಾರತದ ರಾಜಕೀಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಿದ್ವತ್‌ಪೂರ್ಣ ಲೇಖನಗಳ ಸರಣಿಗಳನ್ನು ಬರೆದಿದ್ದಾರೆ.

ಆಧುನಿಕ ಭಾರತದ ಇತಿಹಾಸ ಕುರಿತು ಮೆಹ್ತಾ 12 ಸಂಪುಟಗಳ ಕೃತಿಗಳನ್ನು ಬರೆದಿದ್ದಾರೆ. ‘ಡ್ಯಾಡೀಜಿ’ ಎಂಬುದು ಅವರ ಆತ್ಮ ಚರಿತ್ರೆಯ 12 ಸಂಪುಟಗಳ ಕೃತಿಶ್ರೇಣಿ. ಅವರಿಗೆ ಮ್ಯಾಕ್‌ ಆರ್ಥರ್ ಫೌಂಡೇಷನ್‌ನ ‘ಜೀನಿಯಸ್ ಗ್ರಾಂಟ್’ ಗೌರವ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ದೊರೆತಿವೆ.