Wednesday, 11th December 2024

ನೈಜೀರಿಯಾದಲ್ಲಿ ಟ್ವಿಟ್ಟರ್’ಗೆ ನಿಷೇಧ ಹಿಂತೆಗೆತ

ಅಬುಜ: ಏಳು ತಿಂಗಳ ಹಿಂದೆ ನೈಜೀರಿಯ ಸರ್ಕಾರ ತಾನು ಟ್ವಿಟ್ಟರ್ ಗೆ ವಿಧಿಸಿದ್ದ ನಿಷೇಧವನ್ನು ಹಿಂಪಡೆದುಕೊಂಡಿದೆ.

ಅಧ್ಯಕ್ಷ ಮುಹಮ್ಮದು ಬುಹಾರಿ ಅವರು ಮಾಡಿದ್ದ ಟ್ವೀಟ್ ಗೆ ತನ್ನ ನಿಯಮಾವಳಿಗೆ ವಿರುದ್ಧವಾಗಿದೆಯೆಂದು ಟ್ವಿಟ್ಟರ್ ವಿವಾದಾತ್ಮಕ ಟ್ವೀಟನ್ನು ಡಿಲೀಟ್ ಮಾಡಿತ್ತು.

ಆ ಹಿನ್ನೆಲೆಯಲ್ಲಿ ನೈಜೀರಿಯಾ ಟ್ವಿಟ್ಟರ್ ಗೆ ನಿಷೇಧ ಹೇರಿತ್ತು. ಇದೀಗ ಸರ್ಕಾರ ಟ್ವಿಟ್ಟರ್ ಗೆ ಷರತ್ತುಗಳನ್ನು ವಿಧಿಸಿದ್ದು ಸಂಧಾನ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.