Wednesday, 11th December 2024

ಬರ್ಮಿಂಗ್​ಹ್ಯಾಮ್ ಲಾರ್ಡ್ ಮೇಯರ್ ಆಗಿ ಚಮನ್ ಲಾಲ್ ಆಯ್ಕೆ

ಹೈದರಾಬಾದ್: ಹೋಶಿಯಾರ್ಪುರ್ ನಿವಾಸಿ ಚಮನ್ ಲಾಲ್ ಅವರು ಬರ್ಮಿಂಗ್​ಹ್ಯಾಮ್​ ನಗರದ ಮೊದಲ ಬ್ರಿಟಿಷ್-ಇಂಡಿಯನ್ ಲಾರ್ಡ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಭಾರತೀಯ ಮೂಲದ ಸಿಖ್ ಕೌನ್ಸಿಲರ್ ಜಸ್ವಂತ್ ಸಿಂಗ್ ಬರ್ಡಿ ಅವರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ ಲ್ಯಾಂಡ್ಸ್‌ನಲ್ಲಿರುವ ಕೋವೆಂಟ್ರಿ ನಗರದ ನೂತನ ಲಾರ್ಡ್ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು ಎಂಬುದು ಗಮನಾರ್ಹ.

ಸಿಖ್‌ರ ರವಿದಾಸ್ಸಿಯಾ ಸಮುದಾಯದಿಂದ ಬಂದ ಚಮನ್‌ ಲಾಲ್ ಬ್ರಿಟನ್‌ಗೆ ತೆರಳುವ ಮೊದಲು ಹೋಶಿಯಾರ್‌ಪುರದ ಪಖೋವಾಲ್ ಗ್ರಾಮದಲ್ಲಿ ಜನಿಸಿದ್ದರು. ಅವರು ಹಲವು ವರ್ಷಗಳ ಕಾಲ ಸ್ಥಳೀಯ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದರು.

ಲೇಬರ್ ಪಕ್ಷದ ರಾಜಕಾರಣಿಯಾಗಿ, ಅವರು ಮೊದಲ ಬಾರಿಗೆ 1994ರಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಸೊಹೊ ಮತ್ತು ಜ್ಯುವೆಲ್ಲರಿ ಕ್ವಾರ್ಟರ್ ವಾರ್ಡ್‌ಗಳಿಗೆ ಕೌನ್ಸಿಲರ್‌ಗಳಾಗಿ ಕೂಡಾ ಮರು ಆಯ್ಕೆಯಾಗಿದ್ದರು.