Wednesday, 11th December 2024

ಪೊಂಗಲ್ ಹಬ್ಬ: ಅನಿವಾಸಿ ಭಾರತೀಯರಿಗೆ ಶುಭಾಶಯ ಕೋರಿದ ಬ್ರಿಟನ್‌ ಪ್ರಧಾನಿ

ಲಂಡನ್: ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ.

ಅದ್ಬುತ ಬ್ರಿಟಿಷ್ ತಮಿಳು ಸಮುದಾಯ ಮತ್ತು ವಿಶ್ವದಾದ್ಯಂತ ನೆಲೆಸಿರುವ ತಮಿಳು ಜನರಿಗೆ ಪೊಂಗಲ್ ಹಬ್ಬದ ಶುಭಾಶಯ ಗಳು. ಕುಟುಂಬ, ಸ್ನೇಹಿತರೊಂದಿಗೆ ಒಟ್ಟಿಗೆ ಸೇರಿ ಅದ್ದೂರಿಯಾಗಿ ಹಬ್ಬ ಆಚರಿಸುವುದನ್ನು ಎದುರು ನೋಡುತ್ತಿರುವುದಾಗಿ ಟ್ವೀಟರ್ ನಲ್ಲಿ ನೀಡಿರುವ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಸಹಜವಾಗಿ, ಸಾಂಪ್ರದಾಯಿಕವಾಗಿ ಈ ಪೂಜಾ ದಿನವು ಸುಗ್ಗಿಯ ಆಗಮನವನ್ನು ಆಚರಿಸಲಾಗುತ್ತದೆ ಎಂದು ಅವರು ಹೇಳಿ ದ್ದಾರೆ. ಬ್ರಿಟನ್ ನ ಆರ್ಥಿಕ ಅಭಿವೃದ್ಧಿ, ಶಾಲೆಗಳಲ್ಲಿ ಮಕ್ಕಳಿಗೆ ಬೋಧನೆ, ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ರೋಗಿಗಳಿಗೆ ಉಪಚರ, ದುರ್ಬಲ ವರ್ಗದವರಿಗೆ ಕಾಳಜಿ ಮತ್ತಿತರ ತಮಿಳು ಸಮುದಾಯದ ಕೊಡುಗೆಯನ್ನು ಅಭಿನಂದಿಸಿರುವ ಜಾನ್ಸನ್, ಉತ್ತಮ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಜೊತೆಯಾಗಿ ಮುಂದುವರೆಯೋಣ ಎಂದು ಅವರು ಹೇಳಿದ್ದಾರೆ.