Sunday, 13th October 2024

ಪಾಕಿಸ್ತಾನ: ಭೀಕರ ಬಸ್ ಅಪಘಾತ, 13 ಜನರ ಸಾವು

ಮುಲ್ತಾನ್ : ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ, 13 ಜನರು ಮೃತಪಟ್ಟು, 35 ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದಾರೆ.

ಬಸ್ ಮುಲ್ತಾನ್ ನಿಂದ ಕರಾಚಿಗೆ ಪ್ರಯಾಣಿಸುತಿತ್ತು. ಈ ವೇಳೆ ದಕ್ಷಿಣ ಸಿಂಧ್ ಪ್ರಾಂತ್ಯದ ಸುಕ್ಕೂರ್ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿ, ಸ್ಥಳದಲ್ಲೇ 13 ಮಂದಿ ಮೃತಪಟ್ಟಿದ್ದು, 35 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸತ್ತವರು ಮತ್ತು ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅವರನ್ನು ಸುಕ್ಕೂರ್ ನ ಸಿವಿಲ್ ಆಸ್ಪತ್ರೆ ಮತ್ತು ತಾಲೂಕಾ ಆಸ್ಪತ್ರೆ ಪಾನೊ ಅಕಿಲ್ ಗೆ ಸ್ಥಳಾಂತರಿಸಲಾಗಿದೆ.