Wednesday, 11th December 2024

ಚೀನಾ ಈಸ್ಟರ್ನ್​ ಏರ್​ಲೈನ್ಸ್​ ವಿಮಾನ ಗುವಾಂಗ್ಸಿಯಲ್ಲಿ ಪತನ

ಬೀಜಿಂಗ್: ಚೀನಾದಲ್ಲಿ 133 ಜನ ಪ್ರಯಾಣಿಸುತ್ತಿದ್ದ ವಿಮಾನ ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಪತನ ಗೊಂಡಿದೆ.

ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ 737-800 ವಿಮಾನ ಟೆಂಗ್ ಕೌಂಟಿಯ ವುಝೌ ನಗರದ ಬಳಿ ಅಪಘಾತ ಕ್ಕೀಡಾಗಿದ್ದು, ಗುಡ್ಡ ಪ್ರದೇಶದಿಂದ ಭರ್ಜರಿ ಹೊಗೆ ಏಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಸುಮಾರು ಆರು ವರ್ಷ ಹಳೆ ವಿಮಾನವಾಗಿದ್ದು, ಅಪಘಾತದಲ್ಲಿ ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಆದರೆ ಮೃತಪಟ್ಟವರ ಮತ್ತು ಗಾಯ ಗೊಂಡವರ ಸಂಖ್ಯೆಯ ಬಗ್ಗೆ  ವರದಿ ಯಾಗಿಲ್ಲ.

ಈ ವಿಮಾನ ಕನ್ಮಿಂಗ್‌ ನಿಂದ ಗುವಾಂಗ್ಸಿ ನಗರಕ್ಕೆ ತೆರಳುತ್ತಿತ್ತು. ಆದರೆ, ಗುವಾಂಗ್ಸಿ ನಗರಕ್ಕೆ ನಿಗದಿತ ಸಮಯಕ್ಕೆ ವಿಮಾನ ತಲುಪಿಲ್ಲ ಎಂದು ವರದಿಗಳು ಹೇಳಿವೆ.