ನವದೆಹಲಿ: ಆಗ್ನೇಯ ಕಾಂಬೋಡಿಯಾದ ಸ್ವೇ ರಿಯೆಂಗ್ ಪ್ರಾಂತ್ಯದ 16 ವರ್ಷದ ಬಾಲಕಿಗೆ ಎಚ್ 5 ಎನ್ 1 ಹಕ್ಕಿ ಜ್ವರ ಇರುವುದು ದೃಢಪಟ್ಟಿದ್ದು, 2024 ರ ಆರಂಭದಿಂದ ಒಟ್ಟು ಪ್ರಕರಣಗಳ ಸಂಖ್ಯೆ ಒಂಬತ್ತಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಪ್ರಯೋಗಾಲಯ ಫಲಿತಾಂಶಗಳು ಶನಿವಾರ ಬಾಲಕಿಗೆ ಎಚ್ 5 ಎನ್ 1 ವೈರಸ್ ಇರುವುದು ತೋರಿಸಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರೋಗಿಯು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ವೈದ್ಯರ ತಂಡದಿಂದ ತೀವ್ರ ನಿಗಾ ಪಡೆಯುತ್ತಿದ್ದಾರೆ’ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
ರೋಗಿಯು ಜ್ವರ, ಕೆಮ್ಮು, ಗಂಟಲು ನೋವು ಲಕ್ಷಣಗಳನ್ನು ಹೊಂದಿದ್ದಳು. ಬಾಲಕಿ ಅನಾರೋಗ್ಯಕ್ಕೆ ಒಳಗಾಗುವ ನಾಲ್ಕು ದಿನಗಳ ಮೊದಲು, ಹಳ್ಳಿಯಲ್ಲಿ ಮತ್ತು ಅವಳ ಮನೆಯಲ್ಲಿ ಒಟ್ಟು ಒಂಬತ್ತು ಕೋಳಿಗಳು ಮತ್ತು ಬಾತುಕೋಳಿಗಳು ಮೃತಪಟ್ಟಿದ್ದವು ಎಂದು ಹೇಳಲಾಗಿದೆ.