Thursday, 12th September 2024

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಚೇರಿ ಆರಂಭ ಶೀಘ್ರ

ಸಿಡ್ನಿ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಚೇರಿ ಆರಂಭಿಸುವುದಾಗಿ ಆಸ್ಟ್ರೇ ಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.

ಇದರಿಂದ ದೇಶದ ವ್ಯವಹಾರಗಳನ್ನು ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್ ಮತ್ತು ನಾವೀನ್ಯತೆಯ ವ್ಯವಸ್ಥೆಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಬೆಂಗಳೂರಲ್ಲಿ ಆಸ್ಟ್ರೇಲಿಯಾ ಹೊಸ ಕಾನ್ಸುಲೇಟ್ ಜನರಲ್ ತೆರೆಯಲು ಮುಂದಾಗಿದೆ ಎಂದು ಹೇಳಲು ನನಗೆ ಖುಷಿಯಾ ಗುತ್ತಿದೆ. ಉಭಯ ದೇಶಗಳ ನಡುವೆ ಸಂಪರ್ಕಕ್ಕೆ, ವ್ಯವಹಾರಕ್ಕೆ ಈ ಕಚೇರಿಯಿಂದ ನೆರವು ದೊರೆಯಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದರು.

ಬೆಂಗಳೂರು ಕಾನ್ಸುಲೇಟ್ ಕಚೇರಿಯು ಸ್ಥಾಪನೆಯು ಆಸ್ಟ್ರೇಲಿಯಾದಿಂದ ಭಾರತದಲ್ಲಿ ಇರುವ ಐದನೇ ರಾಜತಾಂತ್ರಿಕ ಕಚೇರಿಯಾಗಿರಲಿದೆ. ಇಲ್ಲಿಗೆ ಭೇಟಿ ನೀಡಿ ಇಂತಹ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದ ಹೇಳಲು ಬಯಸುತ್ತೇನೆ. ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬರಲು ನಾನು ಎದುರು ನೋಡುತ್ತಿದ್ದೇನೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಹೇಳಿದರು.

ಸಂಪರ್ಕ, ವಲಸೆ ಮತ್ತು ಹಸಿರು ಹೈಡ್ರೋಜನ್ ಕಾರ್ಯಪಡೆಯ ಕುರಿತು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡ ನಂತರ, ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ದರು.