Wednesday, 9th October 2024

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೂರ ಶಿಕ್ಷೆ ಮುಂದುವರಿಸಲಾಗುವುದು: ಮುಲ್ಲಾ ನೂರೂದ್ಧೀನ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೂರ ಶಿಕ್ಷೆ ಮುಂದುವರಿಸುವ ಬಗ್ಗೆ ತಾಲಿಬಾನಿ ಮುಖಂಡ ಮುಲ್ಲಾ ನೂರೂದ್ಧೀನ್ ತುರಾಬಿ ಹೇಳಿರುವ ಬಗ್ಗೆ ವರದಿಯಾಗಿದೆ.

ಮುಲ್ಲಾ ನೂರೂದ್ಧೀನ್, ತಪ್ಪು ಮಾಡುವವರನ್ನ ಕೊಲ್ಲುವುದು ಮತ್ತು ಅವರ ಅಂಗಾಂಗಗಳನ್ನು ಕತ್ತರಿಸುವ ಶಿಕ್ಷೆಗಳು ಶೀಘ್ರದಲ್ಲೇ ಮರಳಲಿವೆ. ಕೈ ಕತ್ತರಿಸು ವಂತಹ ಶಿಕ್ಷೆಗಳು ಜನರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಈ ರೀತಿಯ ಶಿಕ್ಷೆಗಳಿಂದ ಜನರಲ್ಲಿ ಭಯ ಹೆಚ್ಚಿಸುತ್ತದೆ. ಮುಂದೆ ಇಂತಹ ತಪ್ಪುಗಳನ್ನು ಮಾಡಬಾರದು ಎಂಬ ಸಂದೇಶ ರವಾನೆಯಾಗಲಿದೆ. ಈ ಸಂಬಂಧ ತಾಲಿಬಾನಿ ಕ್ಯಾಬಿನೆಟ್ ನಲ್ಲಿ ಶಿಕ್ಷೆ ಬಹಿರಂಗವಾಗಿ ನೀಡಬೇಕಾ ಅಥವಾ ನಿರ್ದಿಷ್ಟ ಪ್ರದೇಶ ದಲ್ಲಿ ನೀಡುವ ಕುರಿತ ಕಾನೂನಿನಲ್ಲಿ ಬದಲಾವಣೆ ತರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕಾನೂನು ಸಾಧಕ-ಬಾಧಕಗಳ ಕುರಿತು ಚರ್ಚಿಸಿ ತಮ್ಮ ಅಂತಿಮ ನಿರ್ಧಾರವನ್ನು ಶೀಘ್ರ ದಲ್ಲಿಯೇ ಪ್ರಕಟಿಸುವ ಸಾಧ್ಯತೆಗಳಿವೆ.

ಸ್ಟೇಡಿಯಂನಲ್ಲಿ ಬಹಿರಂಗವಾಗಿ ಶಿಕ್ಷೆ ನೀಡುವ ಕುರಿತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿರೋದು ಸತ್ಯ. ಆದರೆ ಯಾರೂ ನಮ್ಮ ಕಾನೂನು ಮತ್ತು ಶಿಕ್ಷೆ ತಪ್ಪೆಂದು ಹೇಳಿಲ್ಲ. ಹಾಗಾಗಿ ಯಾರೂ ಕಾನೂನುಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಅಗತ್ಯವಿಲ್ಲ. ನಾವು ಇಸ್ಲಾಂ ಧರ್ಮವನ್ನು ಪಾಲಿಸುತ್ತೇವೆ ಮತ್ತು ಕುರಾನ್ ಆಧಾರದ ಮೇಲೆಯೇ ನಮ್ಮ ಕಾನೂನುಗಳು ರಚನೆಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನಿಗಳ ಕ್ರೂರ ರಾಕ್ಷಸ ವರ್ತನೆಯನ್ನು ಇನ್ನೂ ಮರೆತಿಲ್ಲ. 90ರ ದಶಕದಲ್ಲಿ ಅಫ್ಘಾನಿ ಸ್ತಾನ ತಾಲಿಬಾನಿಗಳ ವಶದಲ್ಲಿತ್ತು. ಅಂದು ತಾಲಿಬಾನಿ ಗಳನ್ನು ಕಾಬೂಲ್ ನಗರದ ಸ್ಟೇಡಿಯಂ ಮತ್ತು ಈದ್ಗಾ ಮೈದಾನದಲ್ಲಿ ಕ್ರೂರ ಶಿಕ್ಷೆಯನ್ನು ನೀಡಲಾಗು ತ್ತಿತ್ತು. ಆದರೆ ತಮ್ಮ ಹಳೆಯ ಅಮಾನವೀಯ, ಕ್ರೂರ ಶಿಕ್ಷೆಯ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರೋದು ಅಫ್ಘಾನಿಸ್ತಾನದ ಆತಂಕಕ್ಕೆ ಕಾರಣ ವಾಗಿದೆ.

ಭಾರತ, ಅಮೆರಿಕ ಸೇರಿದಂತೆ ಪ್ರಪಂಚದ ಹಲವು ಪ್ರಮುಖ ರಾಷ್ಟ್ರಗಳು ಅಫ್ಘಾನಿಸ್ತಾನದ ತಾಲಿಬಾನಿ ಸರ್ಕಾರವನ್ನು ಮಾನ್ಯ ಮಾಡಿಲ್ಲ. ಕಾರಣ ತಾಲಿಬಾನಿ ಸರ್ಕಾರದಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಹಕ್ಕಾನಿ ನೆಟ್ ವರ್ಕ್ ಸದಸ್ಯರು ಭಾಗಿಯಾಗಿದ್ದಾರೆ. ಇದರಲ್ಲಿ ಬಹುತೇಕರು ಅಮೆರಿಕ ಮತ್ತು ಸಂಯುಕ್ತ ರಾಷ್ಟ್ರಗಳ ಭಯೋತ್ಪಾದಕರ ಪಟ್ಟಿಯಲ್ಲಿದ್ದಾರೆ.