ಮಿಚಿಗನ್: ಸಿಬ್ಬಂದಿಗಳ ಸಭೆ ನಡೆಯುತ್ತಿದ್ದಾಗ ತನ್ನ ಕಂಪನಿಯ ಅಧ್ಯಕ್ಷರನ್ನೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಮಸ್ಕಿಗಾನ್‌ನಲ್ಲಿ ನಡೆದಿದೆ. ಆರೋಪಿಯನ್ನು ನಾಥನ್ ಮಹೋನಿ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ(Deadly Attack). ನ್ಯಾಯಾಲಯದ ದಾಖಲೆಗಳ ಪ್ರಕಾರ, ವಾಕರ್‌ನ 32 ವರ್ಷದ ಮಹೋನಿ ಮಂಗಳವಾರ ಆಂಡರ್ಸನ್ ಎಕ್ಸ್‌ಪ್ರೆಸ್ ಕಂಪನಿಯಲ್ಲಿ ಬೆಳಿಗ್ಗೆ ಸಭೆ ನಡೆದ ಕಾನ್ಫರೆನ್ಸ್ ಕೋಣೆಗೆ ನಡೆದು ಕಂಪನಿಯ ಅಧ್ಯಕ್ಷ ಎರಿಕ್ ಡೆನ್ಸ್ಲೋ ಅವರಿಗೆ ಚಾಕುವಿನಲ್ಲಿ ಇರಿದಿದ್ದಾನೆ. ನಂತರ ಕಂಪನಿಯಿಂದ ಹೊರಗೆ ಓಡಿ ಹೋಗಿದ್ದಾನೆ.
ಆರೋಪಿ, ಎರಿಕ್ ಡೆನ್ಸ್ಲೋ ಅವರ ಬಲಭಾಗದಲ್ಲಿ ಪಕ್ಕೆಲುಬಿನ ಕೆಳಗೆ ಇರಿದಿದ್ದಾನೆ. ಅವರು ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಡೆನ್ಸ್ಲೋ ಅವರು 8 ರಿಂದ 10 ಇತರ ಉದ್ಯೋಗಿಗಳೊಂದಿಗೆ ಸಭೆಯಲ್ಲಿದ್ದಾಗ ಆರೋಪಿ ಏಕಾಏಕಿ ಒಳನುಗ್ಗಿ ಚಾರು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ತಿಳಿದು ಬಂದಿದೆ. ಮಹೋನಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಕುರಿತು ಫ್ರೂಟ್‌ಪೋರ್ಟ್ ಟೌನ್‌ಶಿಪ್ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದು, ಸಂಭವನೀಯ ಉದ್ದೇಶದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಇತ್ತೀಚೆಗೆ ನ್ಯೂಯಾರ್ಕ್ ನಗರದಲ್ಲಿ ನಡೆದ ಯುನೈಟೆಡ್ ಹೆಲ್ತ್ ಕೇರ್ ಸಿಇಒ ಬ್ರಿಯಾನ್ ಥಾಂಪ್ಸನ್ ಅವರ ಹತ್ಯೆಯಿಂದ ಪ್ರೇರಿತವಾಗಿ ಈ ದಾಳಿಯನ್ನು ಮಾಡಲಾಗಿದೆಯಾ ಎಂದು ಊಹಿಸಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು ನಾವು ಅವರ ಎಲ್ಲಾ ಸಾಮಾಜಿಕ ಖಾತೆಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಿಬ್ಬಂದಿಗಳ ಬಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು ತನಿಖೆ ನಡೆಯುತ್ತಿದೆ.
ವೈದ್ಯರಿಗೆ ಚೂರಿ ಇರಿತ
ಕ್ಯಾನ್ಸರ್ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸುವ ವಿಚಾರದಲ್ಲಿ ವಾದ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ವೈದ್ಯರಿಗೆ ಚಾಕು ಇರಿದ ಘಟನೆ ಇತ್ತೀಚೆಗೆ ನಡೆದಿದೆ. ಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಕೆಸಿಎಸ್‌ಎಸ್‌ಹೆಚ್) ರೋಗಿಯ ಮಗ ವೈದ್ಯರಿಗೆ ಚಾಕು ಇರಿದಿದ್ದಾನೆ.
ಹಿರಿಯ ಆಂಕೊಲಾಜಿಸ್ಟ್ ಆಗಿರುವ ಸಂತ್ರಸ್ತ ಡಾ.ಬಾಲಾಜಿ ಅವರು ಕಲೈಂಜರ್ ಸೆಂಟಿನರಿ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ದಾಳಿ ನಡೆಸಿದ್ದಾನೆ. ಅವರ ಕುತ್ತಿಗೆ, ತಲೆ ಮತ್ತು ಎದೆಯ ಮೇಲ್ಭಾಗದಲ್ಲಿ ಹಲವಾರು ಇರಿತ ಗಾಯಗಳು ಉಂಟಾಗಿವೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತೀವ್ರ ನಿಗಾ ಘಟಕಕ್ಕೆ ಸಾಗಿಸಲಾಯಿತು. ಆರೋಪಿಯನ್ನು ಪೆರುಂಗಲತ್ತೂರಿನ 25 ವರ್ಷದ ವಿಘ್ನೇಶ್ವರನ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ತಾಯಿ ಪ್ರೇಮಾ ಅವರ ಬಗ್ಗೆ ಜಗಳದ ನಂತರ ಚೂರಿಯಿಂದ ಇರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ : Police Suspended: ಅಪರಾಧಗಳಿಗೆ ಕುಮ್ಮಕ್ಕು; ಪಾವಗಡದ ಮೂವರು ಪೊಲೀಸ್ ಪೇದೆಗಳು ಸಸ್ಪೆಂಡ್