Friday, 13th December 2024

ಧರ್ಮನಿಂದನೆ ಸಂದೇಶ: ಮಹಿಳೆಗೆ ಮರಣ ದಂಡನೆ ಶಿಕ್ಷೆ

ರಾವಲ್ಪಿಂಡಿ: ಪಾಕಿಸ್ತಾನ ನ್ಯಾಯಾಲಯ ಆರೋಪಿತ ಮಹಿಳೆಯೊಬ್ಬರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ಧರ್ಮನಿಂದನೆಯ ಸಂದೇಶ ಕಳುಹಿಸಿದ್ದಕ್ಕಾಗಿ ಆರೋಪಿತ ಮಹಿಳೆ ಅನಿಕಾ ಅಟ್ಟಿಕ್ ಅವರನ್ನು ದೋಷಿ ಎಂದು ಪಾಕಿಸ್ತಾನದ ರಾವಲ್ಪಿಂಡಿ ನ್ಯಾಯಾಲಯ ತೀರ್ಪು ನೀಡಿದೆ. 2020ರಲ್ಲಿ ಫಾರೂಕ್ ಹಸ್ಸಂತ್ ಅವರು ಮಹಿಳೆಯ ವಿರುದ್ಧ ದೂರು ದಾಖಲಿಸಿದರು.

ಅನಿಕಾ ವಾಟ್ಸ್‌ಅಪ್ನಲ್ಲಿ ಪ್ರವಾದಿ ಮಹಮ್ಮದ್ ವ್ಯಂಗ್ಯ ಚಿತ್ರಗಳನ್ನು ರವಾನೆ ಮಾಡಿ ಧರ್ಮನಿಂದನೆ ಮಾಡಿದ್ದಾರೆ. ಇದರಿಂದ ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪ ದಾಖಲಾಗಿತ್ತು.

ದೂರುದಾರ ಫಾರೂಕ್ ಮತ್ತು ಆರೋಪಿತೆ ಅನಿಕಾ ಪರಸ್ಪರ ಸ್ನೇಹಿತರಾಗಿದ್ದರು. ಆದರೆ ಇಬ್ಬರ ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿದ್ದವು. ಈ ಸಂದರ್ಭದಲ್ಲಿ ಫಾರೂಕ್ ಮಹಿಳೆಯ ವಿರುದ್ಧ ದೂರು ನೀಡಿದ್ದು, ಆಕೆ ಉದ್ದೇಶಪೂರ್ವಕವಾಗಿ ಪ್ರವಾದಿ ಅವರ ಅವಹೇಳನ ಮಾಡಿದ್ದಾಳೆ, ಫೆಸ್ಬುಕ್ ಖಾತೆಯಲ್ಲೂ ಧರ್ಮನಿಂದನೆಯ ಸಂದೇಶಗಳನ್ನು ಹರಡಿದ್ದಾಳೆ. ನೀತಿವಂತ ಧರ್ಮಿಯರನ್ನು ಅಪಮಾನಿಸಿ, ಮುಸ್ಲಿಂರ ಭಾವನೆಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿ ಸಿದ್ದರು.

ದುರುದ್ದೇಶಪೂರ್ವಕವಾಗಿ ವಿಷಯನ್ನು ಲಂಭಿಸಿ, ಧರ್ಮನಿಂದನೆಗೆ ಜೋಡಿಸಿ ದೂರು ನೀಡಿದ್ದಾನೆ ಎಂದು ನ್ಯಾಯಾಲಯದ ವಿಚಾರಣೆಯ ವೇಳೆ ಆಕೆ ಸಮರ್ಥಿಸಿಕೊಂಡಿದ್ದಳು.