ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Plane Crash: ಸೇನಾ ವಿಮಾನ ಪತನ; ಅಧಿಕಾರಿಗಳು ಸೇರಿ 46 ಜನರ ದುರ್ಮರಣ

ಸುಡಾನ್ ಮಿಲಿಟರಿ ವಿಮಾನವೊಂದು ಪತನಗೊಂಡು ಪ್ರಸೇನಾ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ ಮೃತಪಟ್ಟವರ ಸಂಖ್ಯೆ ಬುಧವಾರ ಕನಿಷ್ಠ 46 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದಾರೆ. ಸೇನಾ ವಿಮಾನವು ವಾಯು ನೆಲೆಯಿಂದ ಟೇಕ್ ಆಫ್ ಆಗುವ ಸಮಯದಲ್ಲಿ ಪತನಗೊಂಡಿದೆ.

ಸುಡಾನ್​ನಲ್ಲಿ ಪತನಗೊಂಡು ಹೊತ್ತಿ ಉರಿದ ವಿಮಾನ- ವಿಡಿಯೊ ಇದೆ

ಸುಡಾನ್‌ನಲ್ಲಿ ವಿಮಾನ ಪತನ

Profile Vishakha Bhat Feb 27, 2025 10:48 AM

ಖಾರ್ಟೂಮ್: ಸುಡಾನ್‌ನ ಓಮ್‌ದುರ್ಮನ್ ನಗರದಲ್ಲಿ ಸಂಭವಿಸಿದ ಮಿಲಿಟರಿ ವಿಮಾನ ಅಪಘಾತದಲ್ಲಿ (Plane Crash) ಮೃತಪಟ್ಟವರ ಸಂಖ್ಯೆ ಬುಧವಾರ ಕನಿಷ್ಠ 46 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ವೇಳೆ ವಿಮಾನ ಪತನಗೊಂಡು, ಸೇನಾ ಸಿಬ್ಬಂದಿ ಮತ್ತು ನಾಗರಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಅನೇಕ ಜನರು ಗಾಯಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ಹತ್ತು ಮಂದಿ ಗಾಯಗೊಂಡ ನಾಗರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೇನಾ ವಿಮಾನವು ವಾಯು ನೆಲೆಯಿಂದ ಟೇಕ್ ಆಫ್ ಆಗುವ ಸಮಯದಲ್ಲಿ ಪತನಗೊಂಡಿದ್ದು, ಸೇನಾ ಸಿಬ್ಬಂದಿ, ನಾಗರಿಕರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಗ್ನಿಶಾಮಕ ತಂಡಗಳು ಅಪಘಾತದ ಸ್ಥಳದಲ್ಲಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಸೇನೆ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ವಾಡಿ ಸೀಡ್ನಾ ವಾಯುನೆಲೆಯ ಬಳಿ ಅಪಘಾತ ಸಂಭವಿಸಿದೆ. ಇದು ಒಮ್ದುರ್ಮನ್‌ನಲ್ಲಿರುವ ಸೇನೆಯ ಅತಿದೊಡ್ಡ ಸೇನಾ ಕೇಂದ್ರಗಳಲ್ಲಿ ಒಂದಾಗಿದೆ.



ಅಪಘಾತದ ಹಿಂದಿನ ಪ್ರಮುಖ ಕಾರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸುಡಾನ್ ಸೇನಾ ವರದಿಯ ಪ್ರಕಾರ, ಸೇನೆಯ ಆಂಟೊನೊವ್ ವಿಮಾನ ಮಂಗಳವಾರ (ಫೆಬ್ರವರಿ 24) ಓಮ್‌ಡುರ್ಮನ್‌ನ ಉತ್ತರದಲ್ಲಿರುವ ವಾಡಿ ಸಯೆದ್ನಾ ವಾಯುನೆಲೆಯಿಂದ ಟೇಕಾಫ್ ಆಗುವಾಗ ಅಪಘಾತಕ್ಕೀಡಾಗಿದೆ. ಸುಡಾನ್ ಆರೋಗ್ಯ ಸಚಿವಾಲಯವು ಸಾವಿನ ಸಂಖ್ಯೆ ಕನಿಷ್ಠ 46 ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Plane crash: ದಕ್ಷಿಣ ಸುಡಾನ್‌ನಲ್ಲಿ ವಿಮಾನ ಪತನ; ಭಾರತೀಯರು ಸೇರಿದಂತೆ 20 ಪ್ರಯಾಣಿಕರ ದುರ್ಮರಣ!

ಸುಡಾನ್‌ನಲ್ಲಿ 2023 ರಿಂದ ಸೇನೆ ಮತ್ತು ಅರೆಸೈನಿಕ ಗುಂಪು, ರಾಪಿಡ್ ಸಪೋರ್ಟ್ ಫೋರ್ಸಸ್ ನಡುವೆ ಅಂತರ್ಯುದ್ಧ ನಡೆಯುತ್ತಲೇ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಖಾರ್ಟೌಮ್ ಮತ್ತು ಇತರ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ವಿರುದ್ಧ ಸೇನೆಯು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪಶ್ಚಿಮ ಡಾರ್ಫರ್‌ನ ಹೆಚ್ಚಿನ ಭಾಗವನ್ನು ನಿಯಂತ್ರಿಸುವ ಆರ್‌ಎಸ್‌ಎಫ್. ಸೋಮವಾರ (ಫೆಬ್ರವರಿ 23) ದಕ್ಷಿಣ ಡಾರ್ಫರ್ ಪ್ರಾಂತ್ಯದ ರಾಜಧಾನಿ ನ್ಯಾಲಾದಲ್ಲಿ ಸುಡಾನ್ ಮಿಲಿಟರಿ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಅದು ಹೇಳಿಕೊಂಡಿದೆ.