ಇಜ್ಮಿರ್ (ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 49ಕ್ಕೆ ಏರಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಶ್ಚಿಮ ಟರ್ಕಿಯಲ್ಲಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 70 ವರ್ಷದ ವೃದ್ಧರೊಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಇಜ್ಮಿರ್‌ನಲ್ಲಿ ಸತ್ತವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಪ್ರೆಸಿಡೆನ್ಸಿ ತಿಳಿ ಸಿದೆ. ಈಶಾನ್ಯ ಭಾಗದ ಸಮೋಸ್‌ನಲ್ಲಿ ಶುಕ್ರವಾರ 6.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಕೇಂದ್ರಬಿಂದು 16.ಕಿ.ಮೀ ಆಳದಲ್ಲಿ ಪತ್ತೆಯಾಗಿತ್ತು.
70 ವರ್ಷದ ಅಹ್ಮೆತ್ ಸಿಟಿಮ್ ಎಂಬವರನ್ನು ಭಾನುವಾರ ಅವಶೇಷಗಳಡಿಯಿಂದ ಹೊರತೆಗೆಯಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.