Wednesday, 11th December 2024

ಡಿಸ್ನಿ ಸಂಸ್ಥೆಯಿಂದ 4000 ಮಂದಿ ವಜಾ…!

ವಾಷಿಂಗ್ಟನ್: ಡಿಸ್ನಿಯು ಮತ್ತೆ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲು ಮತ್ತು ಸಂಸ್ಥೆಯಲ್ಲಿ ಪುನರ್‌ ರಚನೆ ಮಾಡಲು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 7000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಡಿಸ್ನಿ ಸಂಸ್ಥೆಯು ಈಗ ಸುಮಾರು 4000 ಮಂದಿಯನ್ನು ವಜಾಗೊಳಿಸುವ ಸಿದ್ಧತೆ ಮಾಡಿಕೊಂಡಿದೆ.

ಉದ್ಯೋಗ ಕಳೆದುಕೊಳ್ಳುವ ವ್ಯಕ್ತಿಗಳ ಪಟ್ಟಿಯನ್ನು ಮ್ಯಾನೇಜರ್‌ಗಳಿಗೆ ಸಿದ್ಧಪಡಿಸಲು ಡಿಸ್ನಿ ಸಂಸ್ಥೆಯು ತಿಳಿಸಿದ್ದರೂ ಕೂಡಾ ಸಂಸ್ಥೆಯು ಉದ್ಯೋಗ ಕಡಿತವನ್ನು ಮಾಡುವಾಗ ಹಂತ ಹಂತವಾಗಿ ಮಾಡುತ್ತದೆಯೇ ಅಥವಾ ಪಟ್ಟಿಯಲ್ಲಿನ ಎಲ್ಲರನ್ನು ಒಂದೇ ಬಾರಿಗೆ ಕೆಲಸದಿಂದ ತೆಗೆದುಹಾಕು ತ್ತದೆಯೇ ಎಂಬ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.

ಏಪ್ರಿಲ್‌ನಲ್ಲಿ ಡಿಸ್ನಿ ಸಂಸ್ಥೆಯಲ್ಲಿನ ಒಟ್ಟು 4000 ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳ ಲಿದ್ದಾರೆ ಎಂದು ವರದಿಯು ಹೇಳಿದೆ. ಡಿಸ್ನಿಯ ವಾರ್ಷಿಕ ಸಭೆಯು ಏಪ್ರಿಲ್ 3ರಂದು ನಡೆಸ ಲಾಗುತ್ತಿದೆ, ಇದಕ್ಕೂ ಮುನ್ನ ಈ ಉದ್ಯೋಗ ಕಡಿತ ಮಾಹಿತಿ ಲಭ್ಯವಾಗಿದೆ.

ಸಿಇಒ ಬಾಬ್ ಈಗರ್, “ನಾವು ಈಗ ಎದುರಿಸುತ್ತಿರುವ ಸವಾಲನ್ನು ನಿರ್ವಹಣೆ ಮಾಡುವುದು ಮುಖ್ಯವಾಗುತ್ತದೆ. ನಾನು ಈ ನಿರ್ಧಾರವನ್ನು ಅತೀ ಸರಳವೆಂದು ಪರಿಗಣಿಸುವುದಿಲ್ಲ,” ಎಂದಿದ್ದಾರೆ.