Friday, 13th December 2024

Donald Trump: ಹಲವರೊಂದಿಗೆ ಡೇಟಿಂಗ್, ಮೂವರೊಂದಿಗೆ ಮದುವೆ! ಟ್ರಂಪ್ ಬದುಕಿನಲ್ಲಿ ಬಂದು ಹೋದವರ ಪಟ್ಟಿ ಇಲ್ಲಿದೆ!

Donald Trump

ಅಮೆರಿಕದಲ್ಲಿ (america) ಮತ್ತೆ 2ನೇ ಬಾರಿಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ (Republican candidate) ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರಕ್ಕೆ ಬಂದಿದ್ದು, ಅವರ ರಾಜಕೀಯ ಜೀವನದ ಜೊತೆಜೊತೆಗೆ ವೈಯಕ್ತಿಕ ಜೀವನವೂ ಹೆಚ್ಚು ಸುದ್ದಿಯಲ್ಲಿರುತ್ತದೆ. ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ಅವರ ಖಾಸಗಿ ಜೀವನ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಹೆಚ್ಚು ಆಸಕ್ತಿಯ ವಿಷಯವಾಗಿದೆ.

ಮಾಧ್ಯಮ ಕ್ಷೇತ್ರದ ದೊರೆಯಾಗಿ ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ಟ್ರಂಪ್ ಅವರ ಪ್ರೇಮ ಜೀವನವು ಸಾರ್ವಜನಿಕರನ್ನು ಆಕರ್ಷಿಸುತ್ತಲೇ ಇದೆ. ಕುತೂಹಲಕಾರಿ ಅಂಶವೆಂದರೆ ಟ್ರಂಪ್ ಅವರು ಮೂರು ಬಾರಿ ವಿವಾಹವಾಗಿದ್ದರು. ಅವರ ಮಾಜಿ ಪತ್ನಿಯರಲ್ಲಿ ಇವಾನಾ ಟ್ರಂಪ್ (1977-1992), ಮಾರ್ಲಾ ಮ್ಯಾಪಲ್ಸ್ (1993-1999), ಮತ್ತು ಮೆಲಾನಿಯಾ ಟ್ರಂಪ್ (2005-2021) ಸೇರಿದ್ದಾರೆ.

ವೈವಾಹಿಕ ಜೀವನದೊಂದಿಗೆ ಡೊನಾಲ್ಡ್ ಟ್ರಂಪ್ ಅನೇಕರ ಜೊತೆಗೆ ಡೇಟಿಂಗ್ ಕೂಡ ಮಾಡಿದ್ದಾರೆ ಎನ್ನುವ ವದಂತಿಗಳಿವೆ. ಇದರಲ್ಲಿ ಮುಖ್ಯವಾಗಿ ಕೇಳಿ ಬರುವ ಹೆಸರೆಂದರೆ 1990ರ ದಶಕದ ಉತ್ತರಾರ್ಧದಲ್ಲಿ ಮಾಡೆಲ್ ಕಾರಾ ಯಂಗ್, 1993ರಲ್ಲಿ ನಾರ್ವೇಜಿಯನ್ ಉತ್ತರಾಧಿಕಾರಿ ಸೆಲಿನಾ ಮಿಡೆಲ್ಫಾರ್ಟ್.

ಟ್ರಂಪ್ ಅವರ ಪತ್ನಿಯರು ಮತ್ತು ಅವರು ಸಂಬಂಧ ಹೊಂದಿದ್ದ ಮಹಿಳೆಯರ ಕುರಿತು ಕಿರು ಮಾಹಿತಿ ಇಲ್ಲಿದೆ.

Donald Trump

ಮೆಲಾನಿಯಾ ಟ್ರಂಪ್

1998ರಲ್ಲಿ ನಡೆದ ನ್ಯೂಯಾರ್ಕ್ ಫ್ಯಾಷನ್ ವೀಕ್ ಪಾರ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಮೆಲಾನಿಯಾ ಕ್ನಾಸ್ ಅವರನ್ನು ಭೇಟಿಯಾಗಿದ್ದರು. ಟ್ರಂಪ್ ಮತ್ತು ಮೆಲಾನಿಯ 2000ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ಬಳಿಕ 2005ರ ಜನವರಿ 22ರಂದು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು.

ಮೆಲಾನಿಯಾ ಟ್ರಂಪ್ ಮೂಲತಃ ಸ್ಲೊವೇನಿಯಾದವರು. ಫ್ಯಾಷನ್ ಮಾಡೆಲ್ ಆಗಿದ್ದ ಅವರು 2017ರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದಾಗ ಅಮೆರಿಕದ ಪ್ರಥಮ ಮಹಿಳೆ ಎನ್ನುವ ಹೆಸರು ಗಳಿಸಿದರು.

Donald Trump

ಮೇರಿ ಯಂಗ್

ಡೊನಾಲ್ಡ್ ಟ್ರಂಪ್ ಅವರ ಎರಡನೇ ಪತ್ನಿ ಮಾರ್ಲಾ ಮ್ಯಾಪಲ್ಸ್ ಅವರೊಂದಿಗೆ ವಿಚ್ಛೇದನದ ಬಳಿಕ 1997ರಲ್ಲಿ ಮೇರಿ ಯಂಗ್ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದರು.ಇವರ ಸಂಬಂಧವು 1999ರವರೆಗೆ ಅಂದರೆ ಕೇವಲ ಎರಡು ವರ್ಷಗಳ ಕಾಲ ನಡೆಯಿತು.

ಸಮಾಜವಾದಿಯಾಗಿ ಗುರುತಿಸಿಕೊಂಡಿದ್ದ ಮೇರಿ ಯಂಗ್ ಹಲವಾರು ಉನ್ನತ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಟ್ರಂಪ್ ಅವರೊಂದಿಗಿನ ಸಂಬಂಧವು ಅವರ ಖ್ಯಾತಿಯನ್ನು ಹೆಚ್ಚಿಸಿದೆ.

Donald Trump

ಆಲಿಸನ್ ಜಿಯಾನಿನಿ

ಟ್ರಂಪ್ ಅವರು ತಮ್ಮ ಮೊದಲ ಪತ್ನಿ ಇವಾನಾ ಟ್ರಂಪ್‌ನಿಂದ ವಿಚ್ಛೇದನ ಪಡೆದ ಬಳಿಕ ಸ್ವಲ್ಪ ಸಮಯ ಮಾಜಿ ಮಾಡೆಲ್ ಆಲಿಸನ್ ಜಿಯಾನಿನಿ ಅವರೊಂದಿಗೆ ಡೇಟಿಂಗ್ ನಡೆಸಿದರು. ಆದರೆ ಬಳಿಕ ಅವರು ಎರಡನೇ ಪತ್ನಿ ಮಾರ್ಲಾ ಮ್ಯಾಪಲ್ಸ್ ಅವರನ್ನು ಮದುವೆಯಾದರು.

1997ರಲ್ಲಿ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಆಲಿಸನ್ ಅವರನ್ನು ಭೇಟಿಯಾದ ಟ್ರಂಪ್ ಅವರ ಸಂಬಂಧವು ಕೆಲವೇ ತಿಂಗಳಲ್ಲಿ ಕೊನೆಗೊಂಡಿತ್ತು. ಆಲಿಸನ್ ಅವರು ಮಾಡೆಲಿಂಗ್ ಮೂಲಕ ವೃತ್ತಿಜೀವನ ಪ್ರಾರಂಭಿಸಿದ್ದು, ಹಲವಾರು ಚಾರಿಟಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Donald Trump

ಇಂಗ್ರಿಡ್ ಸೇನ್ಹೇವ್

ಬೆಲ್ಜಿಯನ್ ಮಾಡೆಲ್ ಇಂಗ್ರಿಡ್ ಸೆನ್ಹೇವ್ ಅವರೊಂದಿಗೆ 1997ರ ಸುಮಾರಿಗೆ ಡೊನಾಲ್ಡ್ ಟ್ರಂಪ್ ಡೇಟಿಂಗ್ ಪ್ರಾರಂಭಿಸಿದರು. ಫ್ಯಾಶನ್ ಜಗತ್ತಿನಲ್ಲಿ ಯಶಸ್ವಿ ವೃತ್ತಿಜೀವನಕ್ಕಾಗಿ ಹೆಸರುವಾಸಿಯಾದ ಇಂಗ್ರಿಡ್ ಸೆನ್ಹೇವ್, 1991ರಲ್ಲಿ ಎಲೈಟ್ ಲುಕ್ ಆಫ್ ದಿ ಇಯರ್ ಸ್ಪರ್ಧೆಯ ವಿಜೇತರಾಗಿದ್ದರು.

Donald Trump

ಕೈಲೀ ಬಾಕ್ಸ್

ಡೊನಾಲ್ಡ್ ಟ್ರಂಪ್ ಮತ್ತು ನ್ಯೂಜಿಲೆಂಡ್ ಮಾಡೆಲ್ ಕೈಲೀ ಬಾಕ್ಸ್ 1990ರ ದಶಕದ ಕೊನೆಯಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಇವರಿಬ್ಬರ ಸಂಬಂಧ ನಿಶ್ಚಿತಾರ್ಥದವರೆಗು ಹೋಗಿತ್ತು ಎನ್ನಲಾಗಿದೆ.

ಕೈಲೀ ಬಾಕ್ಸ್ ನ್ಯೂಜಿಲೆಂಡ್‌ನ ಪ್ರಸಿದ್ಧ ಮಾಡೆಲ್ ಆಗಿದ್ದು ಹೆಸರಾಂತ ನಿಯತಕಾಲಿಕೆಗಳ ಮುಖಪುಟವನ್ನು ಅಲಂಕರಿಸಿದ್ದರು. ಮಾಡೆಲಿಂಗ್ ಜೊತೆಗೆ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Donald Trump

ರೋವಾನ್ನೆ ಬ್ರೂವರ್

ಮಾಜಿ ಮಿಸ್ ಮೇರಿಲ್ಯಾಂಡ್ ಅಮೆರಿಕದ ರೊವಾನ್ನೆ ಬ್ರೂವರ್ ಅವರೊಂದಿಗೆ ಡೊನಾಲ್ಡ್ ಟ್ರಂಪ್ 1993ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಬ್ರೂವರ್ ಮತ್ತು ಟ್ರಂಪ್ ಅವರ ಸಂಬಂಧವು ಸುಮಾರು ಒಂದು ವರ್ಷಗಳ ಕಾಲ ನಡೆಯಿತು. ಅನೇಕ ಅಮೆರಿಕನ್ ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸಿದ್ದ ರೊವಾನ್ನೆ ಮತ್ತು ಟ್ರಂಪ್ ಅವರ ಪ್ರಣಯ ಸಂಬಂಧವು ಹೆಚ್ಚಾಗಿ ಸಾರ್ವಜನಿಕ ಗಮನವನ್ನು ಸೆಳೆದಿದೆ.

Donald Trump

ಕಾರ್ಲಾ ಬ್ರೂನಿ

ಡೊನಾಲ್ಡ್ ಟ್ರಂಪ್ ಮತ್ತು ಇಟಾಲಿಯನ್- ಫ್ರೆಂಚ್ ಗಾಯಕಿ, ಗೀತರಚನೆಕಾರ ಮತ್ತು ಮಾಜಿ ಮಾಡೆಲ್ ಕಾರ್ಲಾ ಬ್ರೂನಿ 1990ರ ದಶಕದ ಆರಂಭದಲ್ಲಿ ಭೇಟಿಯಾಗಿದ್ದು, ಸ್ವಲ್ಪ ಅವಧಿಗೆ ಸಂಬಂಧವನ್ನು ಹೊಂದಿದ್ದರು.

ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಕಾರ್ಲಾ ಬ್ರೂನಿ 1980- 1990ರ ದಶಕದಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಒಬ್ಬರಾಗಿದ್ದರು. ಬಳಿಕ ಅವರು ಫ್ರಾನ್ಸ್‌ನ ಮಾಜಿ ಅಧ್ಯಕ್ಷರಾದ ನಿಕೋಲಸ್ ಸರ್ಕೋಜಿಯನ್ನು ವಿವಾಹವಾಗಿ ಫ್ರಾನ್ಸ್‌ನ ಪ್ರಥಮ ಮಹಿಳೆಯಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು.

Donald Trump

ಮಾರ್ಲಾ ಮ್ಯಾಪಲ್ಸ್

ಡೊನಾಲ್ಡ್ ಟ್ರಂಪ್ ಅವರು 1993ರಲ್ಲಿ ತಮ್ಮ ಎರಡನೇ ಪತ್ನಿ ಮಾರ್ಲಾ ಮ್ಯಾಪಲ್ಸ್ ಅವರನ್ನು ವಿವಾಹವಾದರು. ಮೊದಲ ಪತ್ನಿ ಇವಾನಾ ಟ್ರಂಪ್ ಗೆ 1999ರಲ್ಲಿ ವಿಚ್ಛೇದನ ನೀಡಿದ ಡೋನಾಲ್ಡ್ ಟ್ರಂಪ್ ಬಳಿಕ ಮಾರ್ಲಾ ಮ್ಯಾಪಲ್ಸ್ ಅವರನ್ನು ವಿವಾಹವಾಗಿದ್ದರು. ಅಮೆರಿಕನ್ ನಟಿಯಾಗಿ ಗುರುತಿಸಿಕೊಂಡಿರುವ ಮಾರ್ಲಾ 90ರ ದಶಕದಲ್ಲಿ ನಟನೆಯಿಂದ ಹೆಚ್ಚು ಖ್ಯಾತಿಗಳಿಸಿದರು. ಆದರೆ ಇವರ ಸಂಬಂಧವೂ ವಿಚ್ಛೇದನದಲ್ಲಿ ಕೊನೆಗೊಂಡಿತ್ತು.

Donald Trump

ಗೇಬ್ರಿಯೆಲಾ ಸೆಬಾಟಿನಿ

ಅರ್ಜೆಂಟೀನಾದ ವೃತ್ತಿಪರ ಟೆನಿಸ್ ಆಟಗಾರ್ತಿ ಗೇಬ್ರಿಯೆಲಾ ಸೆಬಾಟಿನಿ ಅವರೊಂದಿಗೆ 1989ರಲ್ಲಿ ಸ್ವಲ್ಪ ಕಾಲ ಸಂಬಂಧ ಹೊಂದಿದ್ದರು. ಗೇಬ್ರಿಯೆಲಾ ಅವರ ಸೌಂದರ್ಯದಿಂದ ಟ್ರಂಪ್ ಆಕರ್ಷಿತರಾಗಿದ್ದರೂ ಅವರ ಸಂಪರ್ಕವು ದೀರ್ಘಾವಧಿಯವರೆಗೆ ಉಳಿಯಲಿಲ್ಲ.

ಗೇಬ್ರಿಯೆಲಾ ಅವರು 80 ಮತ್ತು 90ರ ದಶಕದಲ್ಲಿ ಕ್ರೀಡಾ ಜಗತ್ತಿನಲ್ಲಿ ಖ್ಯಾತಿಯನ್ನು ಗಳಿಸಿದರು. 1990ರಲ್ಲಿ ಯುಎಸ್ ಓಪನ್‌ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ, 1988ರಲ್ಲಿ ವಿಂಬಲ್ಡನ್‌ನಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.

Donald Trump

ಇವಾನಾ ಟ್ರಂಪ್

ಡೊನಾಲ್ಡ್ ಟ್ರಂಪ್ 1976ರಲ್ಲಿ ನ್ಯೂಯಾರ್ಕ್‌ನಲ್ಲಿ ಮಾಜಿ ಜೆಕೊಸ್ಲೊವಾಕಿಯಾದ ಸ್ಕೀ ಚಾಂಪಿಯನ್ ಮತ್ತು ಫ್ಯಾಷನ್ ಮಾಡೆಲ್ ಇವಾನಾ ಝೆಲ್ನಿಕೋವಾ ಅವರನ್ನು ಭೇಟಿಯಾದರು. ಶೀಘ್ರದಲ್ಲೇ ಡೇಟಿಂಗ್ ಪ್ರಾರಂಭಿಸಿ ವಿವಾಹವಾದರು. ಇವರ ಮದುವೆಯು ಸುಮಾರು 14 ವರ್ಷಗಳ ಕಾಲ ನಡೆಯಿತು, ಈ ವೇಳೆ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಎಂಬ ಮೂವರು ಮಕ್ಕಳನ್ನು ಪಡೆದರು. ದಾಂಪತ್ಯ ದ್ರೋಹ ಇವರ ವಿಚ್ಛೇದನಕ್ಕೆ ಕಾರಣವಾಯಿತು.

ಇವಾನಾ ಟ್ರಂಪ್ ಜೆಕ್ ಅಮೆರಿಕನ್ ಉದ್ಯಮಿ ಮತ್ತು ಮಾಜಿ ಫ್ಯಾಷನ್ ಮಾಡೆಲ್ ಆಗಿದ್ದು ಡೊನಾಲ್ಡ್ ಟ್ರಂಪ್ ಅವರನ್ನು ಮದುವೆಯಾದ ಬಳಿಕ ಎಲ್ಲರ ಗಮನ ಸೆಳೆದಿದ್ದಾರೆ. ವಿಚ್ಛೇದನದ ಬಳಿಕ ಅವರು ಪುಸ್ತಕಗಳನ್ನು ಬರೆದರು, ರಿಯಾಲಿಟಿ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು.

Donald Trump

ಕ್ಯಾಂಡಿಸ್ ಬರ್ಗೆನ್

ಡೊನಾಲ್ಡ್ ಟ್ರಂಪ್ ಅವರು 1970ರ ದಶಕದ ಮಧ್ಯಭಾಗದಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕ್ಯಾಂಡಿಸ್ ಬರ್ಗೆನ್ ಅವರನ್ನು ಭೇಟಿಯಾದರು. ಇವರ ಪ್ರೀತಿ ಹೆಚ್ಚು ಸಮಯ ಬೆಳಯಲಿಲ್ಲ. ಕ್ಯಾಂಡಿಸ್ ಬರ್ಗೆನ್ ಹೆಚ್ಚು ಮೆಚ್ಚುಗೆ ಪಡೆದ ಅಮೆರಿಕನ್ ನಟಿ ಮತ್ತು ಮಾಜಿ ಫ್ಯಾಷನ್ ಮಾಡೆಲ್. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರು, ಹಲವಾರು ದಶಕಗಳ ಕಾಲ ನಟನಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.

Donald Trump

ಅನ್ನಾ ನಿಕೋಲ್ ಸ್ಮಿತ್

ಡೊನಾಲ್ಡ್ ಟ್ರಂಪ್ 1990ರ ದಶಕದಲ್ಲಿ ಅಮೆರಿಕನ್ ಮಾಡೆಲ್, ನಟಿ ಅನ್ನಾ ನಿಕೋಲ್ ಸ್ಮಿತ್ ಅವರನ್ನು ಭೇಟಿಯಾಗಿ ಡೇಟಿಂಗ್ ಪ್ರಾರಂಭಿಸಿದರು. ಇವರ ಸಂಬಂಧವು ಅಲ್ಪಕಾಲಿಕವಾಗಿತ್ತು. ಅನ್ನಾ ನಿಕೋಲ್ ಸ್ಮಿತ್ ಅವರು ಮಾಡೆಲ್ ಆಗಿ ಖ್ಯಾತಿಯನ್ನು ಗಳಿಸಿದರು. ಟ್ರಂಪ್ ಜೊತೆಗೆ ಇವರ ಸಂಬಂಧದ ಕುರಿತು ಚರ್ಚೆ 2007ರಲ್ಲಿ ಅಕಾಲಿಕವಾಗಿ ಸಾವನ್ನಪ್ಪುವವರೆಗೂ ಸುದ್ದಿಯಲ್ಲಿತ್ತು.

Donald Trump

ಕಿಮ್ ರಿಚರ್ಡ್ಸ್

ಡೊನಾಲ್ಡ್ ಟ್ರಂಪ್ 2000 ರ ದಶಕದ ಮಧ್ಯಭಾಗದಲ್ಲಿ ಕಿಮ್ ರಿಚರ್ಡ್ಸ್ ಅವರನ್ನು ಭೇಟಿಯಾದರು. ಬಳಿಕ ರಿಚರ್ಡ್ಸ್ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಜೊತೆಗಿನ ಡೇಟಿಂಗ್ ಬಗ್ಗೆ ಒಪ್ಪಿಕೊಂಡರು. ಆದರೂ ಇವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕಿಮ್ ರಿಚರ್ಡ್ಸ್ ಪ್ರಸಿದ್ಧ ಅಮೆರಿಕನ್ ನಟಿಯಾಗಿ ಜನಪ್ರಿಯತೆಯನ್ನು ಗಳಿಸಿದರು.

Donald Trump: ಮತ್ತೆ ಅಧಿಕಾರಕ್ಕೆ ಬಂದ ಟ್ರಂಪ್‌; ಭಾರತದ ಮೇಲೇನು ಪ್ರಭಾವ?

Donald Trum

ಸ್ಟಾರ್ಮಿ ಡೇನಿಯಲ್ಸ್

ವಯಸ್ಕ ಚಿತ್ರ ತಾರೆ ಸ್ಟ್ರೋಮಿ ಡೇನಿಯಲ್ಸ್ 2006ರಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡರು. ಆದರೆ ಇದನ್ನು ಟ್ರಂಪ್ ನಿರಾಕರಿಸಿದರು. ಈ ಸಂಬಂಧದ ಕುರಿತು ಬಹಿರಂಗಪಡಿಸದಂತೆ ಮಾಡಿಕೊಂಡ ಒಪ್ಪಂದದ ಕುರಿತು ಮಾಹಿತಿ 2018ರಲ್ಲಿ ಬೆಳಕಿಗೆ ಬಂದಾಗ ಇದು ವಿವಾದಾತ್ಮಕ ರೂಪ ಪಡೆದಿತ್ತು.