Saturday, 14th December 2024

ತೈಲ ಉತ್ಪನ್ನ ಘಟಕದ ಮೇಲೆ ಡ್ರೋಣ್ ದಾಳಿ

ದುಬೈ: ಸೌದಿ ರಾಜಧಾನಿ ರಿಯಾದ್‍ನಲ್ಲಿರುವ ತೈಲ ಉತ್ಪನ್ನ ಘಟಕದ ಮೇಲೆ ಡ್ರೋಣ್ ದಾಳಿ ನಡೆಸಲಾಗಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜ್ವಾಲೆ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಉಗ್ರರು ಪದೇ ಪದೇ ಸೌದಿ ತೈಲ ಘಟಕಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾಮಾನ್ಯವಾಗಿದೆ. ತೈಲ ಘಟಕದ ಮೇಲಿನ ದಾಳಿಗೆ ಕಟ್ಟಡದ ಕೆಲಭಾಗ ನಾಶವಾಗಿರುವುದು ಪತ್ತೆಯಾಗಿದೆ.

ತೈಲ ಬಾವಿಗೆ ಬೆಂಕಿ ಬಿದ್ದಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily