ಕಾಬೂಲ್ : ತಾಲಿಬಾನ್ ದಾಳಿಯಿಂದ ತತ್ತರಿಸಿರುವ ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿದೆ.
ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪವು ಅಫ್ಘಾನಿಸ್ತಾನದ ಫಾಯ್ಜಾಬಾದ್ ನಿಂದ ಆಗ್ನೇಯಕ್ಕೆ 83 ಕಿ.ಮೀ ದೂರದಲ್ಲಿ ಮಂಗಳವಾರ ಅಪ್ಪಳಿಸಿದೆ ಎಂದು ವರದಿ ತಿಳಿಸಿದೆ.
ಫೈಜಾಬಾದ್ ಆಗ್ನೇಯಕ್ಕೆ 83 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಆ.15 ರಂದು ಆಫ್ಘಾನಿಸ್ತಾನ ಮತ್ತು ಕಜಕಿಸ್ತಾನ ಭಾಗದಲ್ಲಿ ಭೂಕಂಪ ಸಂಭವಿಸಿತ್ತು.
ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ತಾಲಿಬಾನ್ ಉಗ್ರರ ಅಟ್ಟಹಾಸದಿಂದ ನಲುಗಿ ಹೋಗಿರುವ ಆಫ್ಘಾನಿಸ್ತಾನದಲ್ಲಿ ಪದೇ ಪದೇ ಭೂಕಂಪನ ಉಂಟಾಗುತ್ತಿರುವುದು ಆತಂಕ ಹೆಚ್ಚಿಸಿದೆ.