Friday, 13th December 2024

ಮಧ್ಯ ಜಪಾನ್’ನಲ್ಲಿ 6.1 ತೀವ್ರತೆ ಭೂಕಂಪ

ಟೋಕಿಯೋ: ಮಧ್ಯ ಜಪಾನ್’ನಲ್ಲಿ ಸೋಮವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಟೋಕಿಯೋ ಮತ್ತು ಇತರ ನಗರ ಗಳಲ್ಲಿ ಕಂಪನದ ಅನುಭವವಾಗಿದೆ.

ಸುಮಾರು 350 ಕಿಲೋಮೀಟರ್ (217 ಮೈಲಿ) ಆಳದೊಂದಿಗೆ ಭೂಕಂಪದ ಕೇಂದ್ರಬಿಂದುವು ಮಧ್ಯ ಮೀ ಪ್ರಿಫೆಕ್ಚರ್ನಿಂದ ದೂರದಲ್ಲಿತ್ತು ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಶನಿವಾರ ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಬಲವಾದ ಕಂಪನದ ಅನುಭವವಾಗಿದೆ.

ಉತ್ತರಾಖಂಡದ ಪಿಥೋರಗಡ್ನಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 101 ಕಿ.ಮೀ ದೂರದಲ್ಲಿರುವ ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.