Saturday, 14th December 2024

ಕನೆಕ್ಟಿಕಟ್‌ನ ಫೆಡರಲ್‌ ನ್ಯಾಯಧೀಶರಾಗಿ ಸರಳಾ ವಿದ್ಯಾ ನಗಲಾ ನೇಮಕ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಭಾರತ-ಅಮೆರಿಕನ್‌ ಸರಳಾ ವಿದ್ಯಾ ನಗಲಾ ಅವರನ್ನು ಕನೆಕ್ಟಿಕಟ್‌ನ ಫೆಡರಲ್‌ ನ್ಯಾಯಧೀಶರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.

ಈ ಬಗ್ಗೆ ಸೆನೆಟ್‌ ದೃಢಪಡಿಸಿದರೆ,’ ಫೆಡರಲ್ ಪ್ರಾಸಿಕ್ಯೂಟರ್ ಸರಳಾ ವಿದ್ಯಾ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸ ಲಿರುವ ಮೊದಲ ದಕ್ಷಿಣ ಏಷ್ಯಾ ಮೂಲದ ವ್ಯಕ್ತಿಯಾಗಲಿದ್ದಾರೆ.

ಪ್ರಸ್ತುತ, ನಗಲಾ ಅವರು ಕನೆಕ್ಟಿಕಟ್‌ನಲ್ಲಿರುವ ಅಟಾರ್ನಿ ಕಚೇರಿಯಲ್ಲಿ ಅಪರಾಧ ವಿಭಾಗದ ಉಪ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2012ರಲ್ಲಿ ಸರಳಾ ಅವರು ಅಮೆರಿಕದ ಅಟಾರ್ನಿ ಕಚೇರಿಗೆ ಸೇರ್ಪಡೆಯಾದರು.