Wednesday, 11th December 2024

ಡಿಸೆಂಬರ್ 17 ರಂದು ಫಿಫಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಜ್ಯೂರಿಚ್: ಫಿಫಾದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಡಿಸೆಂಬರ್ 17 ರಂದು ವರ್ಚುವಲ್ ಮೂಲಕ ನಡೆಯಲಿದೆ ಎಂದು ಸಾಕರ್ ಆಡಳಿತ ಮಂಡಳಿ ತಿಳಿಸಿದೆ.

ಕಳೆದ ವರ್ಷ ಮಿಲನ್ ನಲ್ಲಿ ಫಿಫಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಆದರೆ, ಈ ಬಾರಿ ಕೊರೋನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ವರ್ಚುಯಲ್ ಕಾರ್ಯಕ್ರಮದ ಮೂಲಕ ಸಮಾರಂಭ ನಡೆಯುತ್ತಿದೆ. ರಾಷ್ಟ್ರೀಯ ತಂಡದ ನಾಯಕರು, ತರಬೇತು ದಾರರು ಜೊತೆಗೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಬುಧವಾರದಿಂದ ಮತದಾನ ಆರಂಭಿಸಿ ಡಿ.9ರವರೆಗೆ ಮಾಡಬಹುದಾಗಿದೆ ಎಂದು ಫಿಫಾ ತಿಳಿಸಿದೆ.