Wednesday, 6th November 2024

ಷಾಪಿಂಗ್‌ ಮಾಲ್‌ಗೆ ಬೆಂಕಿ: 27 ಮಂದಿ ಸಜೀವ ದಹನ

#Osaka

ಒಸಾಕ: ಪಶ್ಚಿಮ ಜಪಾನ್‌ನ ಒಸಾಕಾದಲ್ಲಿನಲ್ಲಿ ಷಾಪಿಂಗ್‌ ಮಾಲ್‌ಗೆ ಬೆಂಕಿ ಬಿದ್ದಿದ್ದು, 27 ಮಂದಿ ಸಜೀವ ದಹನಗೊಂಡಿದ್ದಾರೆ.

ಕಿಟಾಶಿಂಚಿಯ ಶಾಪಿಂಗ್ ಮತ್ತು ಮನರಂಜನಾ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ನಾಲ್ಕನೆಯ ಅಂತಸ್ತಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಎಲ್ಲೆಡೆ ದಟ್ಟ ಹೊಗೆಯಾಡುತ್ತಿದ್ದು, ಬೆಂಕಿ ಬೆಂಕಿ ಎಂದು ಕೂಗಿದರು. ಅನೇಕ ಮಂದಿ ಹೃದಯಾಘಾತ ದಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಒಸಾಕಾ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಅಕಿರಾ ತಿಳಿಸಿ ದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕಟ್ಟಡದಲ್ಲಿ ಕ್ಲಿನಿಕ್, ಪುಸ್ತಕದ ಮಳಿಗೆಗಳು ಇದ್ದವು. ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ.