Sunday, 3rd November 2024

ಉತ್ತರ ಕೊರಿಯಾದಲ್ಲಿ ಮೊದಲ ಕರೋನಾ ಪ್ರಕರಣ ಪತ್ತೆ

Kim jong Un

ಸೋಲ್‌: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೋವಿಡ್-19 ಪ್ರಕರಣ ಪತ್ತೆಯಾಗಿದೆ.

ಸೋಂಕು ಹರಡುವುದನ್ನು ಹತ್ತಿಕ್ಕಲು ದೇಶದಲ್ಲಿ ‘ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಿಸಲಾಗಿದೆ. ಕರೋನಾ ವೈರಸ್‌ ನಿರ್ಮೂ ಲನೆ ಮಾಡಲು ಕಿಮ್ ಜೊಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಡ, ಪರಮಾಣು ಸಶಸ್ತ್ರ ರಾಷ್ಟ್ರದಲ್ಲಿ ಈವರೆಗೆ ಒಂದೇ ಒಂದು ಕೋವಿಡ್‌ ಪ್ರಕರಣಗಳೂ ವರದಿಯಾಗಿರಲಿಲ್ಲ. ದೇಶಕ್ಕೆ ಕೋವಿಡ್‌ ಸಾಂಕ್ರಾಮಿಕ ಪ್ರವೇಶಿಸಿಲ್ಲ ಎಂದು ಆ ದೇಶ ಈ ವರೆಗೆ ಪ್ರತಿಪಾದಿಸಿತ್ತು. 2019 ರಲ್ಲಿ ಸಾಂಕ್ರಾ ಮಿಕ ರೋಗ ಕಾಣಿಸಿ ಕೊಂಡಾಗಿನಿಂದಲೂ ಸರ್ಕಾರವು ದೇಶದ ಎಲ್ಲ ಗಡಿಗಳಲ್ಲಿ ಕಠಿಣ ದಿಗ್ಬಂಧನ ಜಾರಿಗೆ ತಂದಿತ್ತು.

ರಾಜಧಾನಿಯಲ್ಲಿ ಜ್ವರದಿಂದ ಬಳಲುತ್ತಿದ್ದ ರೋಗಿಯೊಬ್ಬರಿಂದ ಪಡೆದ ಮಾದರಿಯನ್ನು ಪರೀಕ್ಷಿಸಲಾಗಿದ್ದು, ವ್ಯಕ್ತಿಗೆ ಓಮೈಕ್ರಾನ್‌ ಸೋಂಕು ತಗುಲಿರುವುದು ದೃಢವಾಗಿದೆ. ವೈರಸ್‌ ನಿಯಂತ್ರಣ ಕ್ಕಾಗಿ ಗರಿಷ್ಠ ತುರ್ತು ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಕಿಮ್‌ ಘೋಷಿಸಿದರು.

ಬಿಗಿಯಾದ ಗಡಿ ನಿಯಂತ್ರಣಗಳು ಮತ್ತು ಲಾಕ್‌ಡೌನ್ ಕ್ರಮಗಳನ್ನು ಜಾರಿ ಗೊಳಿಸಲು ಸೂಚನೆ ನೀಡಿದರು’ ಎಂದು ವರದಿ ಯಾಗಿದೆ.

ಎಲ್ಲಾ ವ್ಯಾಪಾರ ಮತ್ತು ಉತ್ಪಾದನಾ ಚಟುವಟಿಕೆಗಳು ನಡೆಯುತ್ತವಾದರೂ, ಪ್ರತಿ ಕೆಲಸದ ಘಟಕಗಳನ್ನು ಪ್ರತ್ಯೇಕಿಸಲು ತೀರ್ಮಾನಿಸಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ.

ಲಸಿಕೆ ಪೂರೈಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಮತ್ತು ರಷ್ಯಾದಿಂದ ಪ್ರಸ್ತಾವಗಳು ಬಂದಿದ್ದವಾದರೂ, ಉತ್ತರ ಕೊರಿಯಾ ಅದನ್ನೆಲ್ಲ ನಿರಾಕರಿಸಿತ್ತು. ಹೀಗಾಗಿ ಅಲ್ಲಿನ 2.50 ಕೋಟಿ ಜನರಲ್ಲಿ ಯಾರೊಬ್ಬರೂ ಕೋವಿಡ್‌ ಲಸಿಕೆ ಪಡೆದಿಲ್ಲ ಎಂದು ತಜ್ಞರು ಹೇಳಿದ್ದಾರೆ.