Saturday, 14th December 2024

ವಿದ್ಯುತ್ ಚಾಲಿತ ಬುಲೆಟ್ ರೈಲಿನ ಸಂಚಾರಕ್ಕೆ ಚೀನಾ ಚಾಲನೆ

ಬೀಜಿಂಗ್: ಅರುಣಾಚಲಪ್ರದೇಶ ರಾಜ್ಯದ ಗಡಿ ಸಮೀಪದಲ್ಲಿ ಟಿಬೆಟ್ ನ ಹಿಮಾಲಯ ಪ್ರದೇಶದಲ್ಲಿ ಚೀನಾ ಶುಕ್ರವಾರ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಬುಲೆಟ್ ರೈಲಿನ ಸಂಚಾರಕ್ಕೆ ಚಾಲನೆ ಮಾಡಿದೆ. ಈ ರೈಲು ಪ್ರಾಂತೀಯ ರಾಜಧಾನಿ ಲಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಸಮೀಪ ಇರುವ ಆಯಕಟ್ಟಿನ ಟಿಬೆಟಿಯನ್ ಗಡಿ ಪಟ್ಟಣ ನೈಂಗ್ಚಿಯನ್ನು ಸಂಪರ್ಕಿಸುತ್ತದೆ ಎಂದು ವರದಿಯಾಗಿದೆ.

ಜುಲೈ 1 ರಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಶತಮಾನೋತ್ಸವಕ್ಕೂ ಮುನ್ನ ಸಿಚುವಾನ್-ಟಿಬೆಟ್ ರೈಲ್ವೆಯ 435.5 ಕಿ.ಮೀ ಲಾಸಾ-ನಿಂಗ್ಚಿ ವಿಭಾಗವನ್ನು ಉದ್ಘಾಟಿಸ ಲಾಗಿದೆ.

ಮೊದಲ ವಿದ್ಯುದ್ದೀಕೃತ ರೈಲ್ವೆ ಶುಕ್ರವಾರ ಪ್ರಾರಂಭವಾಗಿದ್ದು, ಲಾಸಾ ಮತ್ತು ನೈಂಗ್ಚಿಯನ್ನು ಸಂಪರ್ಕಿಸುವ ಬುಲೆಟ್ ರೈಲು ಮಾರ್ಗವಾಗಿದೆ ತಿಳಿದು ಬಂದಿದೆ. ಈ ಬುಲೆಟ್‌ ರೈಲಿನ ವೇಗವು ಗಂಟೆಗೆ 160 ಕಿ.ಮೀ ಆಗಿದೆ.