Friday, 13th December 2024

ನಾಳೆಯಿಂದ ಖತರ್ ಏರ್‌ವೇಸ್, ಸೌದಿ ಏರ್‌ಲೈನ್ಸ್‌ ವಿಮಾನ ಹಾರಾಟ ಪುನಾರಂಭ

ದುಬೈ: ಖತರ್ ಹಾಗೂ ಸೌದಿ ಆರೇಬಿಯ ಸೋಮವಾರದಿಂದ ತಮ್ಮ ವಾಯುಕ್ಷೇತ್ರಗಳನ್ನು ಉಭಯದೇಶಗಳ ವಿಮಾನಗಳ ಹಾರಾಟಕ್ಕೆ ತೆರೆದಿಡಲಿವೆ. ಖತರ್ ಏರ್‌ವೇಸ್ ಹಾಗೂ ಸೌದಿ ಏರ್‌ಲೈನ್ಸ್‌ನ ವಿಮಾನಗಳು ದೋಹಾ ಹಾಗೂ ರಿಯಾದ್ ನಡುವೆ ಸೋಮವಾರದಿಂದ ವಿಮಾನ ಹಾರಾಟ ಪುನಾರಂಭಿಸುವುದಾಗಿ ಅವು ಘೋಷಿಸಿವೆ.

ಸೋಮವಾರ ರಿಯಾದ್‌ಗೆ ಜನವರಿ 14ರಂದು ಜಿದ್ದಾ ಹಾಗೂ ಜನವರಿ 16ರಂದು ದಮ್ಮಾಮ್‌ಗೆ ವಿಮಾನ ಹಾರಾಟಗಳು ಪುನಾರಂಭಗೊಳ್ಳಲಿದೆಯೆಂದು ಖತರ್ ಏರ್‌ವೇಸ್ ಟ್ವೀಟ್ ಮಾಡಿದೆ. ಬೋಯಿಂಗ್770-300, ಬೋಯಿಂಗ್787-8 ಹಾಗೂ ಏರ್‌ಬಸ್ ಎ350 ವಿಮಾನಗಳು ಹಾರಾಟ ನಡೆಸಲಿವೆ.

ಸೌದಿ ಆರೇಬಿಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಸೋಮವಾರದಿಂದ ದೋಹಾ ಹಾಗೂ ಜಿದ್ದಾ ನಡುವೆ ವಿಮಾನ ಹಾರಾಟಗಳು ಪುನಾರಂಭಗೊಳ್ಳಲಿರುವುದಾಗಿ ತಿಳಿಸಿದೆ.

ಖತರ್ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆಯೆಂದು ಆರೋಪಿಸಿ ಅದರ ವಿರುದ್ಧ ಸೌದಿ ಆರೇಬಿಯ, ಯುಎಇ, ಬಹರೈನ್ ಹಾಗೂ ಈಜಿಪ್ಟ್, ರಾಜತಾಂತ್ರಿಕ, ವಾಣಿಜ್ಯ ಹಾಗೂ ಪ್ರಯಾಣ ನಿರ್ಬಂಧಗಳನ್ನು ಹೇರಿದ್ದವು.