Friday, 13th December 2024

ಲ್ಯಾಂಡಿಂಗ್​ ವೇಳೆ ಕಾರ್ಗೋ ವಿಮಾನ ಪತನ

ಕೋಸ್ಟಾರಿಕ : ಲ್ಯಾಂಡಿಂಗ್​ ವೇಳೆ ಕಾರ್ಗೋ ವಿಮಾನ ಪತನಗೊಂಡು ಎರಡು ಭಾಗವಾಗಿರುವ ಘಟನೆ ಕೋಸ್ಟಾರಿಕಾದಲ್ಲಿ ನಡೆದಿದೆ.

ಬೋಯಿಂಗ್​ 757 ಕಾರ್ಗೋ ವಿಮಾನವು ಸ್ಯಾನ್​ಜೋಸ್​ನ ಸಾಂಟಾ ಮಾರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್​ ಆಯಿತು. 25 ನಿಮಿಷದ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಸಮಸ್ಯೆ ಗುರುತಿಸಿದ ಪೈಲಟ್​ ತಕ್ಷಣ ಮಾಹಿತಿ ನೀಡಿ ತುರ್ತು ಲ್ಯಾಂಡಿಂಗ್​ಗೆ ಅನುಮತಿ ಕೋರಿದರು. ಅನುಮತಿ ಸಿಕ್ಕ ಕೂಡಲೇ ವಾಪಸ್​ ಸಾಂಟಾ ಮಾರಿಯಾ ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ.

ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗುವಾಗ ರನ್​ವೇಯಲ್ಲಿ ವೇಗವಾಗಿ ಬಂದ ವಿಮಾನ ದಿಢೀರ್​ ತಿರುವು ಪಡೆದು ಎರಡು ಭಾಗಗಳಾಗಿ ಪತನವಾಯಿತು. ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲೇ ಇದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅವಘಡ ತಪ್ಪಿಸಿದ್ದಾರೆ.

ಪತನದ ವೇಳೆ ಇಬ್ಬರು ಸಿಬ್ಬಂದಿ ವಿಮಾನದಲ್ಲಿ ಇದ್ದರು. ಪೈಲಟ್​ಗಳ ಸಮಯ ಪ್ರಜ್ಞೆಯಿಂದ​ ದುರಂತವೊಂದು ತಪ್ಪಿದೆ.