Saturday, 14th December 2024

ಹಾಂಕಾಂಗ್‌: ನಾಲ್ವರು ಪ್ರಜಾಪ್ರಭುತ್ವ ಪರ ಸಂಸದರು ಅನರ್ಹ

ಹಾಂಕಾಂಗ್: ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬುದಾಗಿ ಪರಿಗಣಿಸಲಾಗಿರುವ ಹಾಂಕಾಂಗ್‌ನ ನಾಲ್ವರು ಪ್ರಜಾಪ್ರಭುತ್ವ ಪರ ಸಂಸದರನ್ನು ಬುಧವಾರ ಅನರ್ಹಗೊಳಿಸಲಾಗಿದೆ. ಚೀನಾವು ಹಾಂಕಾಂಗ್‌ಗೆ ರಾಜಕಾರಣಿಗಳನ್ನು ಅನರ್ಹಗೊಳಿಸುವ ಅಧಿಕಾರ ನೀಡಿದ ತಕ್ಷಣ ಈ ಬೆಳವಣಿಗೆ ನಡೆದಿದೆ.

ತಮ್ಮ ಸಹೋದ್ಯೋಗಿಗಳನ್ನು ಅನರ್ಹಗೊಳಿಸಿದರೆ, ತಾವು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹಾಂಕಾಂಗ್‌ನ 19 ಪ್ರಜಾ ಪ್ರಭುತ್ವ ಪರ ಸಂಸದರು ಸೋಮವಾರ ಎಚ್ಚರಿಕೆ ನೀಡಿದ ಬಳಿಕ, ಈ ನಾಲ್ವರನ್ನು ಅನರ್ಹಗೊಳಿಸಲಾಗಿದೆ.

ಈ ನಾಲ್ವರ ಅನರ್ಹತೆ ಹಾಂಕಾಂಗ್‌ನ ಪ್ರಜಾಪ್ರಭುತ್ವ ಚಳವಳಿಗೆ ದೊಡ್ಡ ಹೊಡೆತವಾಗಿದೆ. ಹಾಂಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಚೀನಾ ಹೇರಿದ ಬಳಿಕ, ಅಲ್ಲಿನ ಪ್ರಜಾಪ್ರಭುತ್ವ ಚಳವಳಿಯ ಮೇಲೆ ನಿರಂತರವಾಗಿ ಆಕ್ರಮಣ ನಡೆಯು ತ್ತಿದೆ.