ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಮಹಿಳೆಯರ ಜೊತೆ ಟ್ರಾನ್ಸ್‌ಜೆಂಡರ್ ಭಾಗಿಯಾಗಿದ್ದರು ಎಂಬ ಆರೋಪ ವಿವಾದವಾಗುತ್ತಿರುವಾಗಲೇ ಇದೀಗ ಫ್ರೆಂಚ್ ಅಧ್ಯಕ್ಷರೇ ವಿವಾದಕ್ಕೆ ಗುರಿಯಾಗಿದ್ದಾರೆ.
2024 ರ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಎಮ್ಯಾನುಯೆಲ್ ತನ್ನ ಕ್ರೀಡಾ ಸಚಿವರೊಂದಿಗೆ ಭಾವೋದ್ವೇಗಕ್ಕೆ ಒಳಗಾಗುತ್ತಿರುವಂತೆ ಕಂಡುಬರುವ ಚಿತ್ರ ವೈರಲ್ ಆಗುತ್ತಿದೆ.
ಈ ಫೋಟೋದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಕ್ರೀಡಾ ಸಚಿವೆ ಅಮೆಲಿ ಔಡಿಯಾ-ಕ್ಯಾಸ್ಟೆರಾ ಪರಸ್ಪರ ಚುಂಬಿಸುತ್ತಿರುವುದು ಕಂಡು ಬಂದಿದೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಕ್ರೀಡಾ ಸಚಿವೆ ಅಮೆಲಿ ಔಡಿಯಾ-ಕ್ಯಾಸ್ಟೆರಾ ಪರಸ್ಪರ ಚುಂಬಿಸುತ್ತಿರುವ ಫೋಟೋ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ವಿವಾದ ಎಬ್ಬಿಸಿದೆ. ಈ ಚಿತ್ರದಲ್ಲಿ, ಫ್ರೆಂಚ್ ಅಧ್ಯಕ್ಷ 46 ವರ್ಷದ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು 46 ವರ್ಷದ ಮಾಜಿ ಟೆನಿಸ್ ಆಟಗಾರ್ತಿ ಮತ್ತು ಫ್ರೆಂಚ್ ಕ್ರೀಡಾ ಸಚಿವ ಅಮೆಲಿ ಔಡಿಯಾ-ಕ್ಯಾಸ್ಟೆರಾ ಅವರು ಚುಂಬಿಸುತ್ತಿರುವುದನ್ನು ಕಾಣಬಹುದು. ಮ್ಯಾಕ್ರನ್ ಅವರನ್ನು ಅಮೆಲಿ ಔಡಿಯಾ-ಕ್ಯಾಸ್ಟೆರಾ ತಮ್ಮ ತೋಳುಗಳಿಂದ ಬಿಗಿಯಾಗಿ ಹಿಡಿದುಕೊಂಡು ಮೈಮರೆತು ಚುಂಬಿಸು ತ್ತಿದ್ದಾರೆ. ಎರಡನೇ ಚಿತ್ರದಲ್ಲಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತನ್ನ ತೋಳುಗಳಲ್ಲಿ ಅಮೆಲಿ ಔಡಿಯಾ-ಕ್ಯಾಸ್ಟೆರಾ ಅವರನ್ನು ಬಂಧಿಸಿ ಚುಂಬಿಸುತ್ತಿರುವುದನ್ನು ಕಾಣಬಹುದು.
ಔಡಿಯಾ-ಕ್ಯಾಸ್ಟೆರಾ ಮ್ಯಾಕ್ರನ್‌ರ ತೋಳನ್ನು ಒಂದು ಕೈಯಿಂದ ಹಿಡಿದು, ಇನ್ನೊಂದನ್ನು ಅವರ ಕುತ್ತಿಗೆಗೆ ಪ್ರೀತಿಯಿಂದ ಸುತ್ತುತ್ತಾರೆ ಮತ್ತು ಫ್ರೆಂಚ್ ನಾಯಕನ ಕುತ್ತಿಗೆಗೆ ಪ್ರೀತಿಯಿಂದ ಚುಂಬಿಸುತ್ತಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಲವರು ಹುಬ್ಬು ಹಾರಿಸಿದ್ದಾರೆ.
ಮ್ಯಾಕ್ರನ್ ಕಳೆದ ಜನವರಿಯಲ್ಲಿ ಫ್ರಾನ್ಸ್‌ನ ಶಿಕ್ಷಣ ಮಂತ್ರಿಯಾಗಿ ಔಡಿಯಾ-ಕ್ಯಾಸ್ಟೆರಾ ಅವರನ್ನು ನೇಮಿಸಿದರು, ಆದರೆ ಅವರು ತಮ್ಮ ಮಕ್ಕಳನ್ನು ಐಷಾರಾಮಿ ಖಾಸಗಿ ಶಾಲೆಗಳಿಗೆ ಕಳುಹಿಸಿ ಸರ್ಕಾರಿ ಶಾಲೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ವಿವಾದದ ನಂತರ ಒಂದು ತಿಂಗಳಲ್ಲೇ ಅವರನ್ನು ಹುದ್ದೆಯಿಂದ ಹೊರಹಾಕಲಾಯಿತು.