Saturday, 14th December 2024

ನ್ಯೂಜಿಲೆಂಡ್‌ ಸಂಸತ್: ಗೌರವ್‌ ಶರ್ಮಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ನ್ಯೂಜಿಲೆಂಡ್‌ ಸಂಸತ್‌ಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವೈದ್ಯ ಗೌರವ್‌ ಶರ್ಮಾ ಬುಧವಾರ ಸಂಸ್ಕೃತ ದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಹಿಮಾಚಲ ಪ್ರದೇಶದ ಹಮೀರ್‌ಪುರ್‌ ಮೂಲದ ಗೌರವ್, ಲೇಬರ್‌ ಪಾರ್ಟಿ ಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಗೌರವ್‌ ಅವರು ನ್ಯೂಜಿ ಲೆಂಡ್‌ನ‌ ಅಧಿಕೃತ ಭಾಷೆ ಮೌರಿಯಲ್ಲಿ ಮತ್ತು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಹಿಂದಿ ಬಿಟ್ಟು ಸಂಸ್ಕೃತದಲ್ಲಿಯೇ ಪ್ರಮಾಣ ಸ್ವೀಕರಿಸಿದ ಬಗ್ಗೆ ಟ್ವೀಟ್‌ ಮಾಡಿ ವಿವರಣೆ ನೀಡಿದ ಡಾ.ಗೌರವ್‌, ಸಂಸ್ಕೃತದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿ ದರೆ ನನಗೆ ಮಾತನಾಡಲು ಸಾಧ್ಯವಿಲ್ಲದ ಭಾಷೆಗಳೂ ಸೇರಿದಂತೆ ಎಲ್ಲವಕ್ಕೂ ಗೌರವ ನೀಡಿದಂತಾ ಗುತ್ತದೆ’ ಎಂದು ಬರೆದುಕೊಂಡಿದ್ದಾರೆ.