Saturday, 14th December 2024

ಈಜಿಪ್ಟ್ ಮಧ್ಯಸ್ಥಿಕೆ: ಕದನ ವಿರಾಮಕ್ಕೆ ಇಸ್ರೇಲ್-ಪ್ಯಾಲೆಸ್ತೀನ್ ಸಮ್ಮತಿ

ಜೆರುಸಲೇಂ: ಗಾಝಾ ಪಟ್ಟಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಸಂಷರ್ಘಕ್ಕೆ ಅಂತ್ಯಹಾಡಲು ಈಜಿಪ್ಟ್ ಮಧ್ಯಸ್ಥಿಕೆ ಯಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿ ಯಾಗಿದ್ದು ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಹೋರಾಟಗಾರರು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ ಗಾಝಾ ಗಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ತಲೆದೋರಿದ ಅತ್ಯಂತ ಗಂಭೀರವಾದ ಉದ್ವಿಗ್ನತೆ ಶಮನ ಗೊಳ್ಳುವ ಎಲ್ಲಾ ಸಾಧ್ಯತೆಗಳೂ ಗೋಚರಿಸಿವೆ.

ಗಾಝಾ ಗಡಿಭಾಗದಲ್ಲಿ ಸುಮಾರು 3 ದಿನ ನಡೆದ ಘರ್ಷಣೆ, ಹಿಂಸಾಚಾರದಲ್ಲಿ ಪ್ಯಾಲೆಸ್ತೀನ್’ನ ಕನಿಷ್ಟ 44 ಮಂದಿ ಮೃತ ಪಟ್ಟಿದ್ದು 311 ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲಿಗೂ ವ್ಯಾಪಕ ನಾಶ-ನಷ್ಟವಾಗಿದ್ದು ಗಾಝಾ ಪ್ರದೇಶ ದಿಂದ ಹಾರಿಬಂದ ಕ್ಷಿಪಣಿಗಳು ಇಸ್ರೇಲ್‌ನ ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದು ಟೆಲ್‌ಅವೀವ್ ಮತ್ತು ಅಶ್ಕೆಲಾನ್ ಸೇರಿದಂತೆ ಹಲವು ನಗರಗಳಲ್ಲಿನ ನಿವಾಸಿಗಳನ್ನು ಆಶ್ರಯತಾಣಕ್ಕೆ ರವಾನಿಸ ಲಾಗಿದೆ ಎಂದು ಗಾಝಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಸ್ರೇಲ್ ಮತ್ತು ಪೆಲೆಸ್ತೀನ್ ಹೋರಾಟಗಾರರು ಪ್ರತ್ಯೇಕ ಹೇಳಿಕೆಗಳಲ್ಲಿ ಕದನ ವಿರಾಮವನ್ನು ಘೋಷಿಸಿದ್ದು ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಈಜಿಪ್ಟ್ ಧನ್ಯವಾದ ಅರ್ಪಿಸಿದ್ದಾರೆ.

ಈ ಬಾರಿಯ ಸಂಘರ್ಷದಲ್ಲಿ ಪೆಲೆಸ್ತೀನ್ ಹೋರಾಟಗಾರರು ಮಾತ್ರ ಪಾಲ್ಗೊಂಡಿದ್ದು, ಗಾಝಾ ಪಟ್ಟಿಯಲ್ಲಿ ಆಡಳಿತ ನಡೆಸು ತ್ತಿರುವ ಹಮಾಸ್ ಸಂಘಟನೆ ದೂರ ಉಳಿದಿತ್ತು.

ಇಸ್ರೇಲ್- ಪ್ಯಾಲೆಸ್ತೀನ್ ಹೋರಾಟಗಾರರ ಮಧ್ಯೆ ಕದನ ವಿರಾಮಕ್ಕಾಗಿ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿರು ವಂತೆಯೇ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ರವಿವಾರ ಮತ್ತೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 5 ಮಂದಿ ಮೃತಪಟ್ಟಿರುವುದಾಗಿ ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.