Sunday, 6th October 2024

ಗೂಗಲ್‌ಗೆ 750 ಕೋಟಿ ರೂ., ಮೆಟಾಗೆ 175 ಕೋಟಿ ರೂ ದಂಡ

ಮಾಸ್ಕೋ: ನಿಷೇಧಿತ ಅಂಶಗಳನ್ನು ತೆಗೆದು ಹಾಕುವಲ್ಲಿ ವಿಫಲಗೊಂಡ ಕಾರಣಕ್ಕಾಗಿ ಗೂಗಲ್‌ಗೆ 750 ಕೋಟಿ ರೂ. , ಫೇಸ್‌ಬುಕ್ ಮಾತೃಸಂಸ್ಥೆ ಮೆಟಾಗೆ 175 ಕೋಟಿ ರೂ ಮಾಸ್ಕೋ ನ್ಯಾಯಾಲಯ ದಂಡ ವಿಧಿಸಿದೆ.

ನಿರ್ಲಕ್ಷ್ಯದ ಕಾರಣ 750 ಕೋಟಿ ರೂ.ಗಳ ಆಡಳಿತಾತ್ಮಕ ದಂಡವನ್ನು ಪಾವತಿಸುವಂತೆ ಟ್ಯಾಗನ್ಸ್ಕಿ ನ್ಯಾಯಾಲಯ ಆದೇಶಿಸಿದೆ.

ಮಾದಕ ದ್ರವ್ಯಗಳ ದುರುಪಯೋಗ, ಶಸ್ತ್ರಾಸ್ತ್ರಗಳು, ಸ್ಫೋಟಕ ಪದಾರ್ಥಗಳಿಗೆ ಸಂಬಂಧಿಸಿದ ಅಂಶ ಗಳನ್ನು ತೆಗೆದುಹಾಕುವಲ್ಲಿ ವಿಫಲವಾಗಿವೆ.

ಜೈಲಿನಲ್ಲಿರುವ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರನ್ನು ಬೆಂಬಲಿಸಿ ಕಾನೂನು ಬಾಹಿರವಾಗಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಅಂಶಗಳ ಪ್ರಕಟಿಸುವುದನ್ನು ಅಧಿಕಾರಿಗಳು ತೀವ್ರವಾಗಿ ವಿರೋಧಿಸಿದ್ದರು. ರಷ್ಯಾದಲ್ಲಿ ಗೂಗಲ್‌ ಚಟುವಟಿಕೆಗಳ ಮೇಲೆ ಈ ದಂಡ ಯಾವುದೇ ಪರಿಣಾಮ ಬೀರುವು ದಿಲ್ಲ. ಇತರ ಟೆಕ್‌ ದಿಗ್ಗಜ ಸಂಸ್ಥೆಗಳಿಗೆ ಸಂದೇಶ ರವಾನಿಸಿದಂತಾಗದೆ ಎಂದು ರಷ್ಯಾದ ಅಧಿಕಾರಿ ಅಲೆಕ್ಸಾಂಡರ್ ಕಿನ್‌ಸ್ಟೈನ್ ಹೇಳಿದ್ದಾರೆ.