Friday, 13th December 2024

ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ: ಓರ್ವನ ಸಾವು, ಮೂವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಸಂಟಾ ರೋಸಾದಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಮಧ್ಯರಾತ್ರಿ ಸಮಯದಲ್ಲಿ ಸಂಟಾ ರೋಸಾ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದು, ಈ ಸಂದರ್ಭದಲ್ಲಿ ನಾಲ್ವರು ಗುಂಡಿನ ದಾಳಿಗೆ ಒಳಗಾಗಿರು ವುದು ಪತ್ತೆಯಾಗಿತ್ತು. ಘಟನೆಯಲ್ಲಿ 35 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಗುಂಡಿನ ದಾಳಿಯಲ್ಲಿ ಸಂಟಾ ರೋಸಾ ಮೂಲದ 29 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕಿ ಇಬ್ಬರೂ ತೀವ್ರವಾಗಿ ಗಾಯಗೊಂಡಿ ದ್ದು, 16 ವರ್ಷದ ಬಾಲಕನ ಮೇಲೂ ಗುಂಡು ಹಾರಿಸಲಾಗಿತ್ತು.

ಕಾನೂನು ಬಾಹಿರವಾಗಿ ನಡೆದ ಪಟಾಕಿ ಪ್ರದರ್ಶನ ಕಾರ್ಯಕ್ರಮ ವೀಕ್ಷಿಸಲು 10ಕ್ಕೂ ಅಧಿಕ ಮಂದಿ ಗುಂಪುಗೂಡಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.