Friday, 13th December 2024

ಹೈಟಿ ಭೂಕಂಪನ: ಮೃತರ ಸಂಖ್ಯೆ 2,189ಕ್ಕೆ ಏರಿಕೆ

ಹೈಟಿ: ಭೂಕಂಪನದಿಂದ ಹೈಟಿಯಲ್ಲಿ ಮೃತಪಟ್ಟವರ ಸಂಖ್ಯೆ 2,189ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಕಳೆದ ಶನಿವಾರ ಸಂಭವಿಸಿದ 7.2 ತೀವ್ರತೆಯ ಭೂಕಂಪನದಿಂದ ಸಾವಿರಾರು ಮಂದಿ ನೆಲೆ ಕಳೆದು ಕೊಂಡಿದ್ದಾರೆ. ಅತಿಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಪ್ರಧಾನಿ ಏರಿಯಲ್ ಹೆನ್ರಿ, ಸಂತ್ರಸ್ತರಿಗೆ ಧೈರ್ಯ ತುಂಬಿದ್ದರು. ಜತೆಗೆ, ಶೀಘ್ರ ನೆರವು ಒದಗಿಸುವ ಭರವಸೆ ನೀಡಿದ್ದರು.

ಪ್ರಬಲ ಭೂಕಂಪದಿಂದಾಗಿ ಸುಮಾರು 5700 ಮಂದಿ ಗಾಯಗೊಂಡಿದ್ದರು. ನೂರಾರು ಮನೆಗಳು, ಕಟ್ಟಡ ಗಳು ಉರುಳಿ ಬಿದ್ದಿವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.