Wednesday, 18th September 2024

ಕದನ ವಿರಾಮ ಆರಂಭ: 13 ಒತ್ತೆಯಾಳುಗಳ ಬಿಡುಗಡೆ

ಟೆಲ್ ಅವೀವ್: ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರದಿಂದ ಆರಂಭಗೊಂಡಿದ್ದು, ಮೊದಲ ಬ್ಯಾಚಿನಲ್ಲಿ 13 ಒತ್ತೆಯಾಳು ಸೇರಿದಂತೆ ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಕತಾರಿನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಮಾತನಾಡಿ, ಕದನ ವಿರಾಮವು ಪ್ರಾರಂಭವಾಗಿದ್ದು, ಮಹಿಳೆ ಮತ್ತು ಮಕ್ಕಳು ಸೇರಿದಂತೆ 13 ಮಂದಿ ಒತ್ತೆಯಾಳುಗಳನ್ನು ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಬಿಡುಗಡೆ ಮಾಡಲು ನಿರ್ಧರಿಸಲಾದ ಪ್ಯಾಲೆಸ್ಟೀನ್ ಕೈದಿಗಳ ಪಟ್ಟಿಯನ್ನು ಇಸ್ರೇಲ್ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ಹಂತ, ಹಂತವಾಗಿ ಹಮಾಸ್ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲಿನಿಂದ 150 ಪ್ಯಾಲೆ ಸ್ಟೀನ್ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು. ‘ಮೂಲ ಒಪ್ಪಂದದಂತೇ ನಿಗದಿತ ಸ್ಥಳದಲ್ಲೇ ಬಿಡುಗಡೆ ಕಾರ್ಯ ನಡೆಯಲಿದೆ’ ಎಂದು ತಿಳಿಸಿದ್ದಾರೆ. ಸೇನೆ ಆಧಿಕಾರಿಯೊಬ್ಬರು ಮಾತನಾಡಿ, ‘ತಾತ್ಕಾಲಿಕ ಕದನ ವಿರಾಮವು ಮುಂದೆ ಹೋಗಿದೆ. ಕಾರ್ಯಾಚರಣೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ವಿಳಂಬವು ಒತ್ತೆಯಾಳುಗಳ ಕುಟುಂಬ ಸದಸ್ಯರಲ್ಲಿ ಹಾಗೂ ಕದನ ವಿರಾಮದ ನಿರೀಕ್ಷೆಯಲ್ಲಿದ್ದ, 47 ದಿನಗಳಿಂದ ಭೀತಿಯ ಲ್ಲಿಯೇ ದಿನದೂಡುತ್ತಿರುವ ಗಾಜಾದ ಅಸಂಖ್ಯಾತ ನಿವಾಸಿಗಳಲ್ಲೂ ಆತಂಕವನ್ನು ಹೆಚ್ಚಿಸಿದೆ. ಕದನ ನಿರತ ಹಮಾಸ್ ಬಂಡು ಕೋರರು ಹಾಗೂ ಇಸ್ರೇಲ್ ಸೇನೆಯ ನಡುವೆ ಒತ್ತೆಯಾಳುಗಳ ಬಿಡುಗಡೆಗಾಗಿ ಒಡಂಬಡಿಕೆ ಮೂಡಿತ್ತು. ಇಸ್ರೇಲ್, ಅಮೆರಿಕ, ಕತಾರ್ ಇದಕ್ಕಾಗಿ ಮಧ್ಯಸ್ಥಿಕೆಯನ್ನು ವಹಿಸಿದ್ದವು.

250ಕ್ಕೂ ಅಧಿಕ ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಒಯ್ದಿತ್ತು. ಪ್ರತಿಯಾಗಿ ಗಾಜಾದಲ್ಲಿ ಹಮಾಸ್ ಇರುವ ಕೇಂದ್ರಗಳ ಮೇಲೆ ಬಾಂಬ್ ದಾಳಿಗಳನ್ನು ಇಸ್ರೇಲ್ ನಡೆಸಿದೆ. 11,000ಕ್ಕೂ ಅಧಿಕ ಮಂದಿ ಈ ದಾಳಿಗಳಲ್ಲಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *