Sunday, 1st December 2024

ಭಾರೀ ಮಳೆ: ದಕ್ಷಿಣ ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತರ ಶಿಬಿರ ನಾಶ

ಢಾಕಾ: ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರೋಹಿಂಗ್ಯಾ ನಿರಾಶ್ರಿತರ ಹಲವು ಶಿಬಿರಗಳು ನಾಶಗೊಂಡಿದ್ದು, ಇತರ ಶಿಬಿರಗಳಲ್ಲಿ ಹಾಗೂ ಸಮುದಾಯ ಭವನಗಳಲ್ಲಿ ವಸತಿ ಸೌಕರ್ಯ ಕಲ್ಪಿಸ ಲಾಗಿದೆ.

ಕಾಕ್ಸ್‌ ಬಜಾರ್‌ ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 30 ಸೆಂ.ಮೀ ಮಳೆಯಾಗಿದೆ. ಈ ಜಿಲ್ಲೆಯಲ್ಲೇ 8 ಲಕ್ಷ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ನಿರಾಶ್ರಿತರ ಏಜೆನ್ಸಿ ತಿಳಿಸಿದೆ.

ಜುಲೈ ತಿಂಗಳಲ್ಲಿ ಸುರಿಯುವ ಸರಾಸರಿ ಮಳೆಯ ಅರ್ಧದಷ್ಟು ಮಳೆ ಒಂದೇ ದಿನ ಸುರಿದಿದೆ. ಈ ವಾರದ ಆರಂಭ ದಲ್ಲಿ ಮಳೆ, ಪ್ರವಾಹ ಮತ್ತು ಭೂ ಕುಸಿತದಿಂದ ಶಿಬಿರಗಳಲ್ಲಿನ ಆರು ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಒಂದು ಮಗುವೂ ಸೇರಿದೆ.

ಅಂದಾಜು 2,500 ತಾತ್ಕಾಲಿಕ ಮನೆಗಳು ನಾಶವಾಗಿವೆ ಅಥವಾ ಹಾನಿಗೊಂಡಿವೆ. 5 ಸಾವಿರಕ್ಕೂ ಹೆಚ್ಚು ನಿರಾ ಶ್ರಿತರನ್ನು ಸಮೀಪದ ಇತರ ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಸಮುದಾಯ ಭವನಗಳಲ್ಲಿ ಉಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.