ಬ್ರೆಜಿಲ್: ದಕ್ಷಿಣ ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಒಂದು ವಾರದಿಂದಲೂ ಭಾರಿ ಮಳೆಯಾಗುತ್ತಿದೆ. ಮಳೆ ಮತ್ತು ಪ್ರವಾಹದಿಂದ ಇಲ್ಲಿಯವರೆಗೆ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. ಸುಮಾರು 1,00,000 ಮನೆಗಳು ನೆಲಸಮವಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ಕಿ ಹರಿಯುತ್ತಿರುವ ನದಿಗಳು ಮತ್ತು ಪ್ರವಾಹ ಸುಮಾರು 1.45 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಸುಮಾರು 2,00,000 ನಿವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಬೇರೆಡೆ ಆಶ್ರಯ ಪಡೆದಿದ್ದಾರೆ.
ಅಂಕಿ ಅಂಶಗಳ ಆಧಾರದ ಮೇಲೆ, ಏಪ್ರಿಲ್ 29 ರಂದು ರಾಜ್ಯದ ಅತ್ಯಂತ ಕೆಟ್ಟ ಹವಾಮಾನ ಸಂಬಂಧಿತ ವಿಪತ್ತು ಸಂಭವಿಸಿದಾಗಿನಿಂದ ಎಲ್ಲಾ ರೀತಿಯ ಸುಮಾರು 99,800 ಮನೆಗಳು ಭಾಗಶಃ ಹಾನಿಯಾಗಿವೆ. ರಾಜ್ಯದ 497 ಪಟ್ಟಣಗಳಲ್ಲಿ ಅರ್ಜೆಂಟೀನಾದ 414 ಪಟ್ಟಣಗಳು ಮತ್ತು ಉರುಗ್ವೆ ಗಡಿಯಲ್ಲಿರುವ ಕೃಷಿಕರು ಭಾರಿ ನಷ್ಟ ಅನುಭವಿಸಿ ದ್ದಾರೆ.
ಮಳೆಯಿಂದ ಆಗಿರುವ ಆರ್ಥಿಕ ನಷ್ಟವನ್ನು ಸುಮಾರು 904 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಮಳೆಯಿಂದ ಉಂಟಾದ ಪ್ರವಾಹವು ಉರುಗ್ವೆ ಮತ್ತು ಅರ್ಜೆಂಟೀನಾ ಗಡಿಯಲ್ಲಿರುವ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಹೆದ್ದಾರಿಗಳು ಮತ್ತು ಸೇತುವೆಗಳನ್ನು ನಾಶಪಡಿಸಿದೆ.