ಟರ್ಕಿ: ತನ್ನ ಗಂಡ ನಿತ್ಯ ಸ್ನಾನ ಮಾಡಲ್ಲ ಎಂದು ಸಿಟ್ಟುಗೊಂಡು, ನನಗೆ ವಿಚ್ಛೇದನ ಕೊಡಿಸಿ ಎಂದು ಪತ್ನಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.
ಅವರು ಎಂದಿಗೂ ಸ್ನಾನ ಮಾಡುವುದಿಲ್ಲ. ಐದು ದಿನಗಳವರೆಗೆ ಒಂದೇ ಬಟ್ಟೆಗಳನ್ನು ಧರಿಸುತ್ತಾರೆ. ಮೂರ್ನಾಲ್ಕು ದಿನ ಬ್ರಷ್ ಮಾಡುವುದಿಲ್ಲ. ಇದರಿಂದಾಗಿ ಆತನ ದೇಹದಿಂದ ದುರ್ವಾಸನೆ ಬರುತ್ತದೆ. ಆತನೊಂದಿಗೆ ಬದುಕುವುದು ಕಷ್ಟಕರವಾಗುತ್ತಿದೆ ಎಂದು ಆರೋಪಿಸಿದ್ದಾಳೆ.
ಪತಿಯ ಜೊತೆ ಕೆಲಸ ಮಾಡುವವರೂ ಬೆವರಿನ ವಾಸನೆಯಿಂದ ಆತನ ಜೊತೆ ಕೆಲಸ ಮಾಡುವುದು ತುಂಬಾ ಕಷ್ಟಗುತ್ತಿದೆ ಎಂದಿದ್ದಾರೆಂದು ದೂರಿ ದ್ದಾಳೆ. ಮಹಿಳೆಯ ದೂರನ್ನು ಪರಿಗಣಿಸಿದ ಟರ್ಕಿಯ ಅಂಕಾರಾದ ಕೌಟುಂಬಿಕ ನ್ಯಾಯಾಲಯ ಸಾಕ್ಷಿಗಳನ್ನು ಕೇಳಿದ್ದು, ಮಹಿಳೆಯು ತನ್ನ ಪತಿ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿಗಳನ್ನು ಹಾಜರುಪಡಿಸಿದ್ದಾಳೆ.
ಸ್ಥಳೀಯರು ಮತ್ತು ಆತನೊಂದಿಗೆ ಕೆಲಸ ಮಾಡುವ ಜನರನ್ನು ಸಹ ನ್ಯಾಯಾಲಯಕ್ಕೆ ಕರೆಸಲಾಗಿದೆ. ಈ ವೇಳೆ ಸಾಕ್ಷಿದಾರರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
ಇಬ್ಬರ ವಾದವನ್ನು ಆಲಿಸಿದ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನ ನೀಡಲು ಒಪ್ಪಿಗೆ ನೀಡಿದೆ. ಅಲ್ಲದೇ ಅಶುದ್ಧವಾಗಿ ಬದುಕುತ್ತಿರುವ ಪತಿಗೆ ಛೀಮಾರಿ ಹಾಕಿದ್ದ, 13.69 ಲಕ್ಷ ರೂ.ಗಳನ್ನು ಮಹಿಳೆಗೆ ಪರಿಹಾರವಾಗಿ ನೀಡುವಂತೆ ಪತಿಗೆ ನ್ಯಾಯಾಲಯ ಆದೇಶಿಸಿದೆ.