Saturday, 23rd November 2024

Iceland volcano: ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಸ್ಫೋಟ; ಇಲ್ಲಿದೆ ವೈಮಾನಿಕ ದೃಶ್ಯದ ವಿಡಿಯೊ

Iceland volcano

ಸರಿಸುಮಾರು ಎಂಟು ಶತಮಾನಗಳ ಬಳಿಕ 10ನೇ ಬಾರಿಗೆ ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ (Iceland volcano) ಸ್ಫೋಟಗೊಂಡಿದೆ. ಇದರ ವೈಮಾನಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮಂದಿಯನ್ನು ವಿಸ್ಮಯಗೊಳಿಸಿದೆ.

ಎಂಟು ಶತಮಾನಗಳ ಬಳಿಕ ಐಸ್‌ಲ್ಯಾಂಡ್‌ನಲ್ಲಿನ ಜ್ವಾಲಾಮುಖಿ ಸ್ಪೋಟಿಸಿದ್ದು, ಇದರ ಅದ್ಭುತ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನೈಋತ್ಯ ಐಸ್ಲ್ಯಾಂಡ್ ನ ರೇಕ್ಜಾನೆಸ್ ಪೆನಿನ್ಸುಲಾದಲ್ಲಿ ನೆಲೆಗೊಂಡಿರುವ ಜ್ವಾಲಾಮುಖಿ ಈ ವರ್ಷ ಏಳನೇ ಬಾರಿಗೆ ಸ್ಫೋಟಿಸಿತು. 2021ರಿಂದ ಬಳಿಕ ಇಲ್ಲಿ 10ನೇ ಬಾರಿಗೆ ಜ್ವಾಲಾಮುಖಿ ಸ್ಫೋಟವಾಗಿದೆ. 800 ವರ್ಷಗಳ ಬಳಿಕ ಇಲ್ಲಿ ಸುಪ್ತಾವಸ್ಥೆಯಲ್ಲಿದ್ದ ಜ್ವಾಲಾಮುಖಿ ಮತ್ತೆ ಜೀವಂತವಾಗಿದೆ.

ತೀರಾ ಇತ್ತೀಚಿನ ಸ್ಫೋಟದ ಹೊಗೆಯು ಆಕಾಶಕ್ಕೆ ವ್ಯಾಪಿಸಿತ್ತು, ಇದರ ಲಾವಾ ಬ್ಲೂ ಲಗೂನ್ ಕಡೆಗೆ ಹರಿಯಿತು. ಇದು ಐಸ್‌ಲ್ಯಾಂಡ್‌ನ ಪಟ್ಟಣವಾದ ಗ್ರಿಂಡವಿಕ್ ಬಳಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಜ್ವಾಲಾಮುಖಿಯ ವೈಮಾನಿಕ ನೋಟ

ಜ್ವಾಲಾಮುಖಿಯು ಸುಂದರ ದೃಶ್ಯವನ್ನು ಮೇಲೆ ಹಾರುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ಕಣ್ತುಂಬಿಕೊಂಡರು. ಈಸಿಜೆಟ್ ಪ್ರಯಾಣಿಕರು ಹಂಚಿಕೊಂಡ ವೈಮಾನಿಕ ದೃಶ್ಯದ ತುಣುಕು ಎಲ್ಲರ ಮನ ಸೆಳೆದಿದೆ.

ಕಾಯ್ಲೆ ಗ್ ಎಂಬವರು ಹಂಚಿಕೊಂಡ ಈ ವಿಡಿಯೋ 5 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದರೆ. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಳೆದ ರಾತ್ರಿ ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ಅವರು ವಿಡಿಯೋದ ಜೊತೆಗೆ ಹೇಳಿಕೊಂಡಿದ್ದಾರೆ.

ಜ್ವಾಲಾಮುಖಿ ಸ್ಫೋಟ

ರೇಕ್ಜಾನ್ಸ್ ಪೆನಿನ್ಸುಲಾದಲ್ಲಿ ಜ್ವಾಲಾಮುಖಿ ಸ್ಫೋಟವು ಬುಧವಾರ ರಾತ್ರಿ 11.14ಕ್ಕೆ ಸಂಭವಿಸಿದೆ. ಇದರಿಂದ ಸುಮಾರು 3 ಕಿಲೋ ಮೀಟರ್ ಉದ್ದದ ಬಿರುಕು ಉಂಟಾಗಿದೆ.

ಇದು ಹಿಂದಿನ ಸ್ಪೋಟಕ್ಕಿಂತ ಚಿಕ್ಕದಾಗಿದೆ ಎಂದು ಐಸ್‌ಲ್ಯಾಂಡ್‌ನ ಹವಾಮಾನ ಕಚೇರಿ ತಿಳಿಸಿದೆ.
ಹಿಂದಿನ ಬಹುತೇಕ ಜ್ವಾಲಾಮುಖಿ ಸ್ಫೋಟಗಳು ಕೆಲವೇ ದಿನಗಳಲ್ಲಿ ಕಡಿಮೆಯಾಗಿವೆ. ಸ್ಫೋಟವು ವಾಯುಯಾನಕ್ಕೆ ಯಾವುದೇ ಅಪಾಯವನ್ನುಂಟು ಮಾಡದಿದ್ದರೂ ಹತ್ತಿರದ ಪಟ್ಟಣವಾದ ಗ್ರಿಂಡಾವಿಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಅನಿಲ ಹೊರಸೂಸುವಿಕೆಯ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

800 ವರ್ಷಗಳ ಬಳಿಕ ಜ್ವಾಲಾಮುಖಿಯು ಕಾಣಿಸಿಕೊಂಡ ಆರಂಭದಲ್ಲಿ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

Viral Video: ಪತಿಯ ಅಫೇರ್‌ ಬಗ್ಗೆ ತಿಳಿದ ಪತ್ನಿ ಮಾಡಿದ್ದೇನು ಗೊತ್ತಾ? ಕುತ್ತಿಗೆಗೆ ಬೋರ್ಡ್‌ ನೇತು ಹಾಕಿಕೊಂಡು ಬೀದಿ ಬೀದಿ ಅಲೆಯುತ್ತಿರುವ ಈತನ ವಿಡಿಯೊ ಫುಲ್‌ ವೈರಲ್‌

ಉತ್ತರ ಅಟ್ಲಾಂಟಿಕ್‌ನಲ್ಲಿ ಜ್ವಾಲಾಮುಖಿ ಪ್ರದೇಶದ ಮೇಲಿರುವ ಐಸ್‌ಲ್ಯಾಂಡ್, ಪ್ರತಿ ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ಸರಾಸರಿ ಒಂದು ಬಾರಿ ಸ್ಫೋಟಗೊಳ್ಳುತ್ತದೆ. 2010ರಲ್ಲಿ ನಡೆದ ಐಜಾಫ್ಜಲ್ಲಾಜೋಕುಲ್ ಜ್ವಾಲಾಮುಖಿ ಸ್ಫೋಟದಿಂದ ಹಲವು ತಿಂಗಳ ಕಾಲ ಅಟ್ಲಾಂಟಿಕ್ ವಾಯುಯಾನಕ್ಕೆ ಅಡ್ಡಿಯನ್ನು ಉಂಟು ಮಾಡಿತ್ತು.