Saturday, 14th December 2024

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಪದಚ್ಯುತಿ: ಸ್ಪೀಕರ್‌ ಎಚ್ಚರಿಕೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿರುವ ಡೊನಾಲ್ಡ್‌ ಟ್ರಂಪ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಅವರನ್ನು ಪದಚ್ಯುತಿ ಮಾಡಲಾಗುವುದು ಎಂದು ಅಮೆರಿಕದ ಸಂಸತ್​​ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಎಚ್ಚರಿಕೆ ನೀಡಿದ್ದಾರೆ.

ನವೆಂಬರ್​ 3ರಂದು ನಡೆದ ಚುನಾವಣೆಯಲ್ಲಿ ರಿಪಬ್ಲಿಕ್​ ಪಕ್ಷದ ಜೋ ಬೈಡೆನ್​ ಬಹುಮತದೊಂದಿಗೆ ವಿಜಯ ಸಾಧಿಸಿದ್ದಾರೆ. ಅವರು ಸಂವಿಧಾನದ ಆದೇಶ ದಂತೆ ಜನವರಿ 20 ರಂದು ಅಧಿಕಾರ ಸ್ವೀಕರಿಸಬೇಕಿದೆ. ಆದರೆ ಇನ್ನೂ ಅಧ್ಯಕ್ಷ ಟ್ರಂಪ್​ ಅವರು ರಾಜೀನಾಮೆ ನೀಡಿಲ್ಲ. ಸಂಸತ್​ ಭವನದ ಮೇಲೆ ಟ್ರಂಪ್​ ಅನುಯಾಯಿಗಳು ಮುತ್ತಿಗೆ ಹಾಕಲಾರಂಭಿಸಿದ್ದಾರೆ.

ಹೀಗಾಗಿ ತಕ್ಷಣವೇ ಟ್ರಂಪ್​ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಸಂಸತ್​ ಭವನಕ್ಕೆ ಮುತ್ತಿಗೆ ಹಾಕಲು ಪ್ರಚೋದಿಸಿದ್ದಾರೆ ಎನ್ನುವ ಆರೋಪದ ಮೇಲೆ ಪದಚ್ಯುತಿ ಮಾಡಲಾಗುವುದು ಎಂದು ನ್ಯಾನ್ಸಿ ತಿಳಿಸಿದ್ದಾರೆ.

ಸಂವಿಧಾನದ 25ನೇ ತಿದ್ದುಪಡಿಯ ಅಸ್ತ್ರ ಹಾಗೂ ಮಹಾಭಿಯೋಗ(ಪದಚ್ಯುತಿ) ನಿರ್ಣಯದೊಂದಿಗೆ ಮುಂದುವರಿಯಲು ನಿಯಮಗಳ ಸಮಿತಿಗೆ ಸೂಚಿಸಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಸತ್ ಭವನದ ಮೇಲೆ ಮುತ್ತಿಗೆ ಹಾಕಿರುವುದನ್ನು ಖಂಡಿಸಿರುವ ಡೆಮಾಕ್ರಟಿಕ್​ ಪಕ್ಷದ ನಾಯಕರು, ಟ್ರಂಪ್​ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ.