Saturday, 14th December 2024

ವಂಚನೆ ಜಾಲ: ಭಾರತೀಯ ಪ್ರಜೆ ಬಂಧನ

ವಾಷಿಂಗ್ಟನ್‌: ಹಿರಿಯ ನಾಗರಿಕರನ್ನು ಗುರಿಯಾಗಿಸಿ ನಡೆಸುತ್ತಿದ್ದ ವಂಚನೆ ಜಾಲ ಆರೋಪದಡಿ ಭಾರತೀಯ ಪ್ರಜೆಯೊಬ್ಬ ನನ್ನು ಬಂಧಿಸಲಾಗಿದೆ.

ಸಂಚು ಮತ್ತು ಇ-ಮೇಲ್‌ ವಂಚನೆ ಕುರಿತ ಆರೋಪದಡಿ ಬಂಧಿತ ಅನಿರುದ್ಧ ಕಲ್ಕೊಟೆಯನ್ನು ಹೂಸ್ಟನ್‌ನ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸ ಲಾಯಿತು. ಕೃತ್ಯದಲ್ಲಿ ಹೂಸ್ಟನ್ ನಿವಾಸಿ ಎಂ.ಡಿ.ಅಜದ್‌ (25) ಕೂಡ ಭಾಗಿ ಎಂದು ತಿಳಿಸಿದ್ದಾರೆ.

ಆರೋಪ ಸಾಬೀತಾದಲ್ಲಿ 20 ವರ್ಷದವರೆಗೆ ಸಜೆ, ₹ 1.95 ಕೋಟಿವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇಂತಹದೇ ಪ್ರಕರಣದಲ್ಲಿ ಮೂವರು ಭಾರತೀಯ ಪ್ರಜೆಗಳು ಅಪರಾಧಿ ಎಂದು ಸಾಬೀತಾಗಿದ್ದು, ಶಿಕ್ಷೆಯ ಸ್ವರೂಪ ಪ್ರಕಟವಾಗಬೇಕಿದೆ ಎಂದಿದ್ದಾರೆ.