ವಾಷಿಂಗ್ಟನ್: ಸುಮಾರು 65,960 ಭಾರತೀಯರು 2022ರಲ್ಲಿ ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಅಮೆರಿಕದ ಕಾಂಗ್ರೆಷನಲ್ ರಿಸರ್ಚ್ ಸರ್ವಿಸಿ ವರದಿ ತಿಳಿಸಿದೆ.
ಈ ಮೂಲಕ ಅಮೆರಿಕದಲ್ಲಿ ಹೊಸದಾಗಿ ನಾಗರಿಕತ್ವ ಪಡೆಯುವ ನಾಗರಿಕರ ದೇಶಗಳ ಪೈಕಿ 2ನೇ ಸ್ಥಾನದಲ್ಲಿದೆ. 2022ರಲ್ಲಿ ಅಂದಾಜು 46 ಮಿಲಿಯನ್ ವಿದೇಶಿ ಸಂಜಾತ ವ್ಯಕ್ತಿಗಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಯ 333 ಮಿಲಿಯನ್‌ನ ಸರಿಸುಮಾರು ಶೇಕಡ 14ರಷ್ಟು ವಿದೇಶಿಗರು. ಇದರಲ್ಲಿ 24.5 ಮಿಲಿಯನ್ ಜನರು, ಅಂದರೆ, ಶೇಕಡ 53ರಷ್ಟು ಜನರು ಸ್ವಾಭಾವಿಕ ನಾಗರಿಕತ್ವ ಪಡೆದಿದ್ದಾರೆ.
2022ರ ಆರ್ಥಿಕ ವರ್ಷದಲ್ಲಿ ಸ್ವತಂತ್ರ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ಪ್ರಕಾರ, 9,69,380 ವ್ಯಕ್ತಿಗಳು ನೈಸರ್ಗಿಕ ನಾಗರಿಕತ್ವ ಪಡೆದಿದ್ದಾರೆ.
128,878 ಮೆಕ್ಸಿಕೊ ಮೂಲದವರು ಅಮೆರಿಕದ ನಾಗರಿಕತ್ವ ಪಡೆದಿದ್ದಾರೆ. ಭಾರತೀಯರು(65,960), ಫಿಲಿಪ್ಪಿನ್ಸ್ (53,413), ಕ್ಯೂಬಾ (46,913), ಡೊಮಿನಿಕನ್ ರಿಪಬ್ಲಿಕ್ (34,525), ವಿಯಟ್ನಾಂ (33,246) ಮತ್ತು ಚೀನಾ (27.038) ನಾಗರಿಕರು ಅಮೆರಿಕ ಪೌರತ್ವ ಪಡೆದಿದ್ದಾರೆ.