Saturday, 14th December 2024

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ

ವಾಷಿಂಗ್ಟನ್: ಒಹಿಯೋ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದ ದೆಹಲಿ ಮೂಲದ ಆದಿತ್ಯ ಅದ್ಲಾಖ ಅವರು ಕಾರಿನಲ್ಲಿ ಚಲಿಸುವಾಗಲೇ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಲಾಗಿದೆ.
ನವೆಂಬರ್ 9ರಂದೇ ಆದಿತ್ಯ ಅದ್ಲಾಖ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇವರು ಎರಡು ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದಿತ್ಯ ಅದ್ಲಾಖಾ ಅವರು ಸಿನ್ಸಿನಾಟಿ ವೈದ್ಯಕೀಯ ಶಾಲೆಯ ವಿಶ್ವವಿದ್ಯಾನಿಲಯದಲ್ಲಿ ಆಣ್ವಿಕ ಮತ್ತು ಅಭಿವೃದ್ಧಿ ಜೀವಶಾಸ್ತ್ರ ವಿಭಾಗದಲ್ಲಿ ನಾಲ್ಕನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿ ಯಾಗಿದ್ದರು.
ಅವರನ್ನು ಯುಎಸ್ ರಾಜ್ಯದ ಓಹಿಯೋದಲ್ಲಿ ಕೊಲೆ ಮಾಡಲಾಗಿದೆ. ಅಂದು ಬೆಳಗ್ಗೆ 6:20 ರ ಸುಮಾರಿಗೆ ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಕಾರಿನಲ್ಲಿ ಚಲಿಸುತ್ತಿದ್ದರು. ಇದೇ ವೇಳೆ ಅಪರಿಚಿತ ದುಷ್ಕರ್ಮಿಗಳು ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.ಕಾರು ಗೋಡೆಗೆ ಗುದ್ದಿದ್ದು, ಆದಿತ್ಯ ಅದ್ಲಾಖ ಅವರಿಗೆ ಗುಂಡು ತಗುಲಿವೆ ಎಂದು ತಿಳಿದುಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ಆದಿತ್ಯ ಅದ್ಲಾಖಾ ಅವರನ್ನು ಯುಸಿ ಮೆಡಿಕಲ್ ಸೆಂಟರಿಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಎರಡು ದಿನಗಳ ನಂತರ ಆದಿತ್ಯ ಮೃತಪಟ್ಟಿದ್ದಾನೆ.

ಆದಿತ್ಯ ಅದ್ಲಾಖಾ ತನ್ನ ವೈದ್ಯಕೀಯ ಶಿಕ್ಷಣಕ್ಕಾಗಿ ಉತ್ತರ ಭಾರತದಿಂದ ಅಮೆರಿಕದ ಸಿನ್ಸಿನಾಟಿಗೆ ಹೋಗಿದ್ದರು. ಇದಕ್ಕೂ, ಮೊದಲು ನವದೆಹಲಿಯ ರಾಮಜಾಸ್ ಕಾಲೇಜಿನಲ್ಲಿ 2018 ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2020 ರಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಶರೀರಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ದ್ದರು.