Tuesday, 12th November 2024

Israel–Hamas war: ಸೈನಿಕರ ಕೊರತೆ ಎದುರಿಸುತ್ತಿರುವ ಇಸ್ರೇಲ್;‌ ಸೈನ್ಯಕ್ಕೆ ಸೇರಲು ಸರ್ಕಾರ ಮನವಿ

Israel–Hamas war

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ(Israel–Hamas war) ಶುರುವಾಗಿ ವರ್ಷಗಳೇ ಕಳೆದರೂ ಇನ್ನೂ ಮುಗಿಯುವ ರೀತಿಯಲ್ಲಿ ಕಾಣಿಸುತ್ತಿಲ್ಲ. ಗಾಜಾ ಪಟ್ಟಿ( gaja patti) ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದು ಕೊಂಡರೆ ಲಕ್ಷಾಂತರ ಮಂದಿ ಮನೆ ಕಳೆದು ಬೀದಿ ಪಾಲಾಗಿದ್ದಾರೆ. ಹಮಾಸ್‌ ನಾಯಕ ಹತ್ಯೆಯ ನಂತರವೂ ಇಸ್ರೇಲ್‌ನ ಪ್ರತಿಕಾರ ಇನ್ನೂ ನಿಂತಿಲ್ಲ. ಈ ನಡುವೆ ಇಸ್ರೇಲ್‌ ಸೈನಿಕರ ಕೊರತೆ ಎದುರಿಸುತ್ತಿದೆ (Israel Struggles With Lack Of Soldiers) ಎಂದು ತಿಳಿದು ಬಂದಿದೆ.

ಗಾಜಾ ಪಟ್ಟಿಯಲ್ಲಿ ನೇಮಕಗೊಂಡಿರುವ ಇಸ್ರೇಲಿ ಸೈನಿಕರು ದಣಿದಿದ್ದು, ಲೆಬನಾನ್‌ನಲ್ಲಿ ವಶ ಪಡಿಸಿಕೊಂಡಿರುವ ಪ್ರದೇಶದ ಕಾವಲಿಗೆ ಹೊಸ ಸೈನಿಕರನ್ನು ನೇಮಕ ಮಾಡುವ ಗುರಿಯನ್ನು ಸರ್ಕಾರ ಹೊಂದಿತ್ತು . ಆದರೆ ಹೊಸ ಸೈನಿಕರ ನೇಮಕಾತಿಗೆ ಜನರೇ ಇಲ್ಲದೇ ಇಸ್ರೇಲ್‌ ಸರ್ಕಾರ ಸಂಕಷ್ಟ ಪಡುವಂತಗಿದೆ.

ಕಳೆದ ವರ್ಷ ಶುರುವಾದ ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಇಸ್ರೇಲ್‌ ಇಲ್ಲಿಯವರೆಗೆ ಸುಮಾರು 367 ಸೈನಿಕರನ್ನು ಕಳೆದು ಕೊಂಡಿದೆ. 2023 ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ ಸೇನೆ 30 ಸಾವಿರ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುವ ಉದ್ದೇಶ ಹೊಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಬೆರಳಣಿಕೆಯಷ್ಟು ಜನ ಸೈನ್ಯ ಸೇರಲು ಮುಂದಾಗಿದ್ದು ಅವರಲ್ಲಿ 40 ವರ್ಷ ಮೇಲ್ಪಟ್ಟ ಪುರುಷರೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಇಸ್ರೇಲ್‌ನಲ್ಲಿ 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ಸೇನೆಯಲ್ಲಿ ಕಾರ್ಯ ನಿರ್ವಹಿಸುವುದು ಕಡ್ಡಾಯವಾಗಿದೆ. ಆದರೂ ಸೇನೆ ಸೈನಿಕರ ಕೊರತೆಯನ್ನು ಎದುರಿಸುತ್ತಿದೆ. ಈಗಾಗಲೆ ಸೇವೆ ಸಲ್ಲಿಸುತ್ತಿರುವವರಿಗೆ ಸೇವಾವಧಿಯಲ್ಲಿ6 ತಿಂಗಳು ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ.

ಇದನ್ನೂ ಓದಿ : Israel Airstrike: ಇರಾನ್‌ ಮೇಲೆ ಇಸ್ರೇಲ್‌ ಎರಡನೇ ಏರ್‌ಸ್ಟ್ರೈಕ್‌; ಇಲ್ಲಿದೆ ಭೀಕರ ದಾಳಿಯ ವಿಡಿಯೋ

1948 ರಲ್ಲಿ ಈ ನಿಯಮವನ್ನು ಅಳವಡಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಇಸ್ರೇಲ್‌ನಲ್ಲಿ18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅಲ್ಟ್ರಾ-ಆರ್ಥೊಡಾಕ್ಸ್ ಪಂಗಡದವರು ಯಹೂದಿ ಗ್ರಂಥಗಳ ಅಧ್ಯಯನಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರೆ ಮಿಲಿಟರಿ ಸೇವೆಯಿಂದ ವಿನಾಯಿತಿ ಪಡೆಯಬಹುದು . ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರ ಅಲ್ಟ್ರಾ-ಆರ್ಥೊಡಾಕ್ಸ್ ಪಂಗಡವನ್ನು ವಿನಾಯಿತಿಯಿಂದ ಮುಕ್ತಗೊಳಿಸಲು ಆದೇಶ ನೀಡಿತ್ತು.

ಅಲ್ಟ್ರಾ-ಆರ್ಥೊಡಾಕ್ಸ್ ಪಂಗಡದ ನಾಯಕ ಮಾತನಾಡಿದ್ದು, “ಆರ್ಯೆಹ್ ಡೆರಿ ನಮಗೆ ದೇಶ ಸೇವೆ ಮಾಡಲು ಯಾವುದೇ ತಕರಾರಿಲ್ಲ. ಆದರೆ ನಮಗೆ ನಮ್ಮ ಧರ್ಮದ ಬಗ್ಗೆಯೂ ಅಷ್ಟೇ ಗೌರವವಿದೆ ಅದನ್ನೂ ಪಾಲಿಸಲು ಸರ್ಕಾರ ನಮಗೆ ಪರವಾನಗಿ ನೀಡಬೇಕು” ಎಂದು ಕೋರಿಕೊಂಡಿದ್ದಾರೆ.