Wednesday, 11th December 2024

ಮೆಕಿನ್ಸೆ ಆಯಂಡ್‌ ಕೋ ಕಂಪನಿಯಿಂದ 2,000 ಉದ್ಯೋಗಿಗಳ ವಜಾ

ವಾಷಿಂಗ್ಟನ್‌: ಸಾಲು ಸಾಲು ಕಂಪನಿಗಳು ಉದ್ಯೋಗ ಕಡಿತವನ್ನು ಘೋಷಿಸುತ್ತಿವೆ. ಇದೀಗ ಈ ಸಾಲಿಗೆ ಮೆಕಿನ್ಸೆ ಆಯಂಡ್‌ ಕೋ ಸೇರ್ಪಡೆಯಾಗಿದೆ.

ಸುಮಾರು 2,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಕಂಪನಿ ಘೋಷಿಸಿದೆ. “ಮುಂದಿನ ವಾರಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

ಈ ವೇಳೆ ಎಷ್ಟು ಉದ್ಯೋಗ ಕಡಿತವಾಗಲಿದೆ ಎಂಬ ಖಚಿತ ಮಾಹಿತಿ ಸಿಗಲಿದೆ.

ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ,’ ಎಂದು ಕಂಪನಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

2021ರಲ್ಲಿ ಕಂಪನಿ ದಾಖಲೆಯ 15 ಬಿಲಿಯನ್‌ ಡಾಲರ್‌ ಆದಾಯ ಗಳಿಸಿತ್ತು. 2022ರಲ್ಲಿ ಇದಕ್ಕಿಂತ ಹೆಚ್ಚಿನ ಆದಾಯ ಗಳಿಸಿತ್ತು. ಒಂದು ದಶಕದಿಂದ ಹೊಸ ಉದ್ಯೋಗಿಗಳ ಸಂಖ್ಯೆ ಏರಿಕೆ ಮಾಡುತ್ತಲೇ ಬಂದಿತ್ತು.