Friday, 13th December 2024

ಟ್ರಂಪ್ ಪರ್ವ ಅಂತ್ಯ, ಜೋ ಬೈಡನ್ ಯುಗ ಆರಂಭ

ವಾಷಿಂಗ್ಟನ್: ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ್ವ ಅಂತ್ಯಗೊಂಡು, ಜೋ ಬೈಡನ್ ಪರ್ವ ಆರಂಭವಾಗಿದೆ.

ಅಮೆರಿಕ ನೂತನ ಅಧ್ಯಕ್ಷರಾಗಿ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜೋ ಬೈಡನ್ ಅಮೆರಿಕದ ೪೬ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.