Wednesday, 11th December 2024

ಯುಎಸ್​​ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ಜಸ್ಟಿಸ್ ಜಾಕ್ಸನ್ ಪ್ರಮಾಣವಚನ ಸ್ವೀಕಾರ

ವಾಷಿಂಗ್ಟನ್ : ಯುಎಸ್​​ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ಕೇತಾಂಜಿ ಬ್ರೌನ್ ಜಾಕ್ಸನ್ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಸುಪ್ರೀ ಕೋರ್ಟ್​ನಲ್ಲಿ ಸೇವೆ ಸಲ್ಲಿಸಿದ ಮೊದಲ ಕಪ್ಪು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜಸ್ಟಿಸ್ ಜಾಕ್ಸನ್ ( 51) ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್​ ನ್ಯಾಯಾಧೀಶ ಸ್ಥಾನಕ್ಕೆ ದೃಢೀಕರಿಸಲಾಗಿತ್ತು. ಸೆನೆಟ್ ಅವರ ನಾಮ ನಿರ್ದೇಶನದಲ್ಲಿ 5 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ನ್ಯಾಯಮೂರ್ತಿ ಸ್ಟೀಫನ್ ಜಿ ಬ್ರೇಯರ್ (83) ಅವರು ಅವಧಿ ಮುಕ್ತಾಯದೊಂದಿಗೆ ಕೆಳಗಿಳಿದಿದ್ದಾರೆ.

ಗುರುವಾರ ಜಸ್ಟೀಸ್ ಜಾಕ್ಸನ್ ಅವರು ಸಾಂವಿಧಾನಿಕ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿ ಜಾನ್ ಜಿ. ರಾಬರ್ಟ್ಸ್ ಜೂನಿಯರ್ ನಿರ್ವಹಿಸಿದರು ಮತ್ತು ನ್ಯಾಯಾಂಗ ಪ್ರಮಾಣ ವಚನವನ್ನು ಜಸ್ಟಿಸ್ ಬ್ರೇಯರ್ ನಿರ್ವಹಿಸಿದರು. ಅವರು ರಾಷ್ಟ್ರದ 116 ನೇ ನ್ಯಾಯಮೂರ್ತಿ ಮತ್ತು ರಾಷ್ಟ್ರದ ಅತ್ಯುನ್ನತ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಆರನೇ ಮಹಿಳೆ ಯಾಗಿದ್ದಾರೆ.