ಒಟ್ಟಾವಾ : ಕೆನಡಾದ (Canada) ಮಾಂಟ್ರಿಯಲ್ ಬೀದಿಗಳಲ್ಲಿ ಶುಕ್ರವಾರ ಪ್ಯಾಲೇಸ್ತೇನಿಯನ್ ಪರ (Anti-Israel, pro-Palestinian activists) ಕಾರ್ಯಕರ್ತರು ಬೀದಿಗಿಳಿದು ಇಸ್ರೇಲ್ ವಿರೋಧಿ ಘೋಷಣೆ ಕೂಗಿ ಹಿಂಸಾಚಾರ ನಡೆಸಿದ್ದಾರೆ. ಗಾಜುಗಳನ್ನು ಒಡೆದು ಹಾಕಿ, ವಾಹನಗಳಿಗೆ ಬೆಂಕಿ ಹಚ್ಚಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಗಲಭೆಗಳ ಮಧ್ಯೆ, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ (Justin Trudeau) ಅವರು ತಮ್ಮ ಕುಟುಂಬದೊಂದಿಗೆ ಟೊರೊಂಟೊದಲ್ಲಿ ಅಮೆರಿಕದ ಪಾಪ್ ತಾರೆ ಟೇಲರ್ ಸ್ವಿಫ್ಟ್ (Taylor Swift) ಅವರ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದು, ಎಲ್ಲೆಡೆ ವೈರಲ್ ಆಗಿದೆ.
ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಟೇಲರ್ ಸ್ವಿಫ್ಟ್ ಸಂಗೀತವನ್ನ ಆನಂದಿಸಿ ನೃತ್ಯ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಪ್ರಧಾನಿ ನೃತ್ಯ ಮಾಡುವ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (Viral Video)
Trudeau is dancing at the Taylor Swift concert while Montreal burns
— The Pleb 🌍 Reporter (@truckdriverpleb) November 23, 2024
Words cannot describe how much I despise this manpic.twitter.com/hCq4t0HBYS
ಈ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ್ಟಿಗರು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೇಶ ಬಿಕ್ಕಟ್ಟು ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಪ್ರಧಾನಿ ನೃತ್ಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ. ವ್ಯಕ್ತಿಯೊಬ್ಬ ಕಮೆಂಟ್ ಮಾಡಿ 50 ವರ್ಷದ ವ್ಯಕ್ತಿ 14 ವರ್ಷದ ಹುಡುಗನಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ ಕಮೆಂಟ್ ಮಾಡಿ ಪ್ರಧಾನಿಯಿರುವ ಸ್ಥಳದಿಂದ ಕೆಲವೇ ದೂರದಲ್ಲಿ ನಿರಾಶ್ರಿತರ ಶಿಬಿರವಿದೆ ಒಮ್ಮೆ ಅಲ್ಲಿ ಭೇಟಿ ನೀಡಿ ಎಂದು ಹೇಳಿದ್ದಾರೆ.
ಶುಕ್ರವಾರ ಸಂಜೆ ಕೆನಡಾದಲ್ಲಿ ಹಿಂಸಾಚಾರ ನಡೆದಿದ್ದು, ಪ್ಯಾಲೇಸ್ತೇನಿಯನ್ ಪರ ಕಾರ್ಯಕರ್ತರು ಇಸ್ರೇಲ್ ವಿರುದ್ಧ ಘೋಷಣೆ ಕೂಗಿ ಗಲಾಟೆ ಮಾಡಿದ್ದಾರೆ. ಪ್ರತಿಭಟನಾಕಾರರು ಪ್ಯಾಲೇಸ್ತೇನಿಯನ್ ಧ್ವಜಗಳನ್ನು ಬೀಸಿ ಹೊಗೆ ಬಾಂಬ್ಗಳನ್ನು ಹೊತ್ತಿಸಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸಲು ಬಂದ ಪೊಲೀಸರೊಂದಿಗೆ ಘರ್ಷಣೆಯಾಗಿದೆ ಎಂದು ತಿಳಿದು ಬಂದಿದೆ. ಉದ್ವಿಗ್ನಗೊಂಡ ಗುಂಪು ಫ್ರೀ ಪ್ಯಾಲೆಸ್ತೀನ್” ಹಾಗೂ ಭಯೋತ್ಪಾದಕ ಇಸ್ರೇಲ್ ಎಂದು ಘೋಷಣೆ ಕೂಗಿದ್ದಾರೆ ಹಾಗೂ ಕೆನಡಾ ಇಸ್ರೇಲ್ ಪರ ಇದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : Amit Shah: ಅಮಿತ್ ಶಾ ವಿರುದ್ಧದ ಕೆನಡಾ ಆರೋಪಕ್ಕೆ ಭಾರತ ಖಂಡನೆ; ಸಾಕ್ಷ್ಯಾಧಾರ ಇದ್ರೆ ಮಾತ್ರ ಮಾತನಾಡಿ ಎಂದು ಖಡಕ್ ಎಚ್ಚರಿಕೆ
ಕೆನಡಾ ಹಾಗೂ ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು, 2023ರ ಜೂನ್ನಲ್ಲಿ ನಡೆದ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ನ ಕೊಲೆ ಪ್ರಕರಣದ ಬಳಿಕ ಶುರುವಾದ ಬಿಕ್ಕಟ್ಟು, ಈಗ ರಾಯಭಾರ ಅಧಿಕಾರಿಗಳನ್ನು ವಜಾಗೊಳಿಸುವ ಪ್ರತೀಕಾರದ ಹಂತಕ್ಕೆ ತಲುಪಿದೆ. ನಿಜ್ಜರ್ ಹತ್ಯೆಯಲ್ಲಿ ಒಟ್ಟಾವದಲ್ಲಿನ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರ ಪಾತ್ರವಿದೆ. ಹೀಗಾಗಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂಬ ಕೆನಡಾ ಆರೋಪ ಹೊಸ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಅದಕ್ಕೆ ತಕ್ಕ ತಿರುಗೇಟು ನೀಡಿದ ಭಾರತ ಸರ್ಕಾರ ಹಂಗಾಮಿ ಹೈಕಮಿನಷರ್ ಸೇರಿದಂತೆ ಕೆನಡಾದ ಆರು ರಾಜತಾಂತ್ರಿಕರನ್ನು ವಜಾಗೊಳಿಸಿ, ಭಾರತದಿಂದ ಜಾಗ ಖಾಲಿ ಮಾಡುವಂತೆ ಗಡುವು ನೀಡಿತ್ತು.