Wednesday, 11th December 2024

ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ ಮಾಡಿದ ಹ್ಯಾರಿಸ್ ವಿಮಾನ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷ ಕಾಣಿಸಿಕೊಂಡು ತುರ್ತಾಗಿ ಭೂಸ್ಪರ್ಶ ಮಾಡಿದೆ.

ಕಮಲಾ ಹ್ಯಾರಿಸ್ ಗ್ವಾಟೆಮಾಲಾಕ್ಕೆ ಹೊರಟಿದ್ದರು. ತುರ್ತು ಭೂ ಸ್ಪರ್ಶ ಘಟನೆ ಹಿನ್ನೆಲೆಯಲ್ಲಿ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಲ್ಲಿ ಇಳಿಯ ಬೇಕಾಯಿತು. ಕಮಲಾ ಹ್ಯಾರಿಸ್, ತಾವು ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ.

ವಾಷಿಂಗ್ಟನ್ ಹೊರವಲದಲ್ಲಿರುವ ಜಾಯಿಂಟ್ ಬೇಸ್ ಆಂಡ್ರ್ಯೂಸ್ನಲ್ಲಿ ‘ಏರ್ ಫೋರ್ಸ್ ಟು’ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ನಂತರ ಬೇರೆ ವಿಮಾನದ ಮೂಲಕ ಕಮಲಾ ಹ್ಯಾರಿಸ್, ಪ್ರಯಾಣ ಬೆಳೆಸಿದರು ಎಂದು ವರದಿಯಾಗಿದೆ