Saturday, 14th December 2024

ಅಪರಿಚಿತ ದುಷ್ಕರ್ಮಿಗಳಿಂದ ವಾಂಟೆಡ್ ಭಯೋತ್ಪಾದಕನ ಹತ್ಯೆ

ರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ನನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಸದಸ್ಯ ಖೈಸರ್ ಫಾರೂಕ್ ನನ್ನು ಹತ್ಯೆಗೀಡಾಗಿದ್ದು, ಭಾನುವಾರ ಕರಾಚಿಯ ಜನ ನಿಬಿಡ ಪ್ರದೇಶದಲ್ಲೇ ಅಪರಿಚಿತರು ಆತನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಲಷ್ಕರ್-ಎ-ತೊಯ್ಬಾವನ್ನು ಸ್ಥಾಪಿಸುವಲ್ಲಿ ಮತ್ತು ಭಯೋತ್ಪಾದಕ ಹಫೀಜ್ ಸಯೀದ್‌ನೊಂದಿಗಿನ ನಿಕಟ ಸಂಬಂಧ ಹೊಂದಿದ್ದ ಕೈಸರ್ ಮೇಲೆ ಗುಂಡಿನ ದಾಳಿಯಾದ ಮಾಹಿತಿ ತಿಳಿಯುತ್ತಿದ್ದಂತೆ ತುರ್ತು ಸೇವೆಗಳು ಘಟನಾ ಸ್ಥಳಕ್ಕೆ ಧಾವಿಸಿದೆ.

ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ನಿಖರ ದಿನಾಂಕ ಮತ್ತು ಸಮಯ ಇಲ್ಲವಾದರೂ ಹಿಂಬದಿಯಿಂದ ಬಂದು ಗುಂಡು ಹಾರಿಸಿದ ವ್ಯಕ್ತಿ ಇತರರೊಂದಿಗೆ ಕರಾಚಿಯ ಬೀದಿಯಲ್ಲಿ ಓಡಿ ಹೋಗಿದ್ದು ದಾಖಲಾಗಿದೆ.