Wednesday, 11th December 2024

ಕೊರೋನ ವೈರಸ್ ಟಾಸ್ಕ್ ಫೋರ್ಸ್‌ನಲ್ಲಿ ಕರ್ನಾಟಕ ಮೂಲದ ವೈದ್ಯ

ನ್ಯೂಯಾರ್ಕ್: ಭಾರತೀಯ-ಅಮೆರಿಕನ್ ವಿವೇಕ್ ಮೂರ್ತಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ರಚಿಸಲಿರುವ ಕೊರೋನ ವೈರಸ್ ಟಾಸ್ಕ್ ಫೋರ್ಸ್‌ನಲ್ಲಿ ಕರ್ನಾಟಕ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

2014ರಲ್ಲಿ ಅಧ್ಯಕ್ಷ ಬರಾಕ್ ಒಮಾಮ ಅವರು ವಿವೇಕ್ ಮೂರ್ತಿ ಅವರನ್ನು ಅಮೆರಿಕದ 19ನೇ ಸರ್ಜನ್ ಜನರಲ್ ಆಗಿ ನೇಮಕ ಮಾಡಿದ್ದರು. ತನ್ನ ಮೊದಲ ವಿಜಯ ಭಾಷಣದಲ್ಲಿ ಮಾತನಾಡಿದ್ದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್, ಅಮೆರಿಕದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಕೊರೋನ ವೈರಸ್ ನಿಯಂತ್ರಿಸಲು ಯಾವುದೇ ಪ್ರಯತ್ನವನ್ನು ವ್ಯರ್ಥ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಕೊರೋನ ವೈರಸ್ ಕುರಿತು ಸೋಮವಾರ ಕಾರ್ಯಪಡೆಯನ್ನು ಘೋಷಿಸುವುದಾಗಿ ಹೇಳಿದ್ದರು.